
ರಶ್ಮಿಕಾ ಮಂದಣ್ಣ ಅವರು ಯಾವಾಗಲೂ ತಮ್ಮ ಭಿನ್ನ ಉಡುಗೆ ಮೂಲಕ ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ಅವರು ಸೀರೆಯಲ್ಲಿ ಮಿಂಚಿದರೆ, ಇನ್ನೂ ಕೆಲವೊಮ್ಮೆ ಅವರು ಕ್ಯಾಶುವಲ್ ಉಡುಗೆಯಲ್ಲಿ ಗಮನ ಸೆಳೆಯುತ್ತಾರೆ. ಅವರ ಹೊಸ ಫೋಟೋಗಳು ಈಗ ವೈರಲ್ ಆಗಿವೆ.

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಶಾರ್ಟ್ ಸ್ಕರ್ಟ್ ಹಾಕಿದ್ದರು. ಮೇಲೆ ಶರ್ಟ್ ಧರಿಸಿದ್ದರು. ಈ ಲುಕ್ ಫ್ಯಾನ್ಸ್ಗೆ ಬಲು ಇಷ್ಟ ಆಗಿದೆ. ಅವರನ್ನು ಎಲ್ಲರೂ ಕೊಂಡಾಡಿದ್ದಾರೆ.

ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಹೇರ್ಸ್ಟೈಲ್ ಭಿನ್ನವಾಗಿವೆ. ಈ ಕಾರಣದಿಂದಲೇ ಅವರ ಲುಕ್ ಸಾಕಷ್ಟು ಗಮನ ಸೆಳೆದಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಕೂಡ ಸಿಕ್ಕಿದೆ. ರಶ್ಮಿಕಾ ಯಾವಾಗಲೂ ಇಷ್ಟೇ ಕ್ಯೂಟ್ ಆಗಿ ಕಾಣಿಸಿಕೊಳ್ಳಲಿ ಎಂದು ಅನೇಕರು ಬಯಸಿದ್ದಾರೆ.

ರಶ್ಮಿಕಾ ಈ ಫೋಟೋಗೆ ವಿವಿಧ ರೀತಿಯ ಕಮೆಂಟ್ಗಳು ಬಂದಿವೆ. ಕೆಲವರು ರಶ್ಮಿಕಾಗೆ ದೃಷ್ಟಿ ಬೀಳಬಹುದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ರಶ್ಮಿಕಾ ಹೇರ್ಸ್ಟೈಲ್ ಇಷ್ಟ ಆಗಿದೆ ಎಂದಿದ್ದಾರೆ. ಒಟ್ಟಾರೆ ಅವರ ಈ ಲುಕ್ ಎಲ್ಲರಿಗೂ ಇಷ್ಟ ಅಂತೂ ಆಗಿದೆ.

ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ರಿಲೀಸ್ ಆದ ಅವರ ಸಿನಿಮಾಗಳು ಯಶಸ್ಸು ಕಂಡಿವೆ. ರಶ್ಮಿಕಾ ಅವರು ತಮ್ಮದೇ ಆದ ಪರ್ಫ್ಯೂಮ್ ಬಿಸ್ನೆಸ್ ಕೂಡ ಆರಂಭಿಸಿದ್ದಾರೆ ಅನ್ನೋದು ವಿಶೇಷ.