- Kannada News Photo gallery Vinay Rajkumar starrer Andondittu Kaala movie gets good response in 2nd week
ಎರಡನೇ ವಾರ ಫ್ಯಾಮಿಲಿ ಆಡಿಯನ್ಸ್ ಗಮನ ಸೆಳೆದ ‘ಅಂದೊಂದಿತ್ತು ಕಾಲ’ ಸಿನಿಮಾ
‘ಅಂದೊಂದಿತ್ತು ಕಾಲ’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿದ್ದು, ಅದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಚಿತ್ರಮಂದಿರಕ್ಕೆ ಕಾಲಿಟ್ಟ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾದ ಕಥೆ ಇಷ್ಟವಾಗಿದೆ. ಕೀರ್ತಿ ನಿರ್ದೇಶನದ, ಭುವನ್ ಸುರೇಶ್ ನಿರ್ಮಾಣದ ಈ ಸಿನಿಮಾಗೆ 2ನೇ ವಾರ ಕೂಡ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
Updated on: Sep 09, 2025 | 6:57 PM

ವಿನಯ್ ರಾಜ್ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಮುಂತಾದವರು ನಟಿಸಿರುವ ‘ಅಂದೊಂದಿತ್ತು ಕಾಲ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಕ್ಲಾಸ್ ಆದಂತಹ ಕಥೆ ಇದೆ.

2ನೇ ವಾರದಲ್ಲಿ ಪ್ರೇಕ್ಷಕರನ್ನು ‘ಅಂದೊಂದಿತ್ತು ಕಾಲ’ ಸಿನಿಮಾ ಸೆಳೆದುಕೊಂಡಿದೆ. ಹೌಸ್ಫುಲ್ ಆಗಿದ್ದು ನೋಡಿ ಚಿತ್ರತಂಡಕ್ಕೆ ಖುಷಿ ಆಗಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾ ಇಷ್ಟಪಟ್ಟಿದ್ದಾರೆ.

ನಿರ್ದೇಶಕನಾಗಬೇಕು ಎಂಬ ಕನಸು ಕಂಡ ಹುಡುಗನ ಪಾತ್ರದಲ್ಲಿ ವಿನಯ್ ರಾಜ್ಕುಮಾರ್ ಅವರು ನಟಿಸಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಎಲ್ಲರಿಗೂ ತಮ್ಮ ಹಳೇ ದಿನಗಳು ನೆನಪಾಗುತ್ತಿವೆ.

‘ಭುವನ್ ಮೂವೀಸ್’ ಮೂಲಕ ಭುವನ್ ಸುರೇಶ್ ಅವರು ಈ ಸಿನಿಮಾವನನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಕ್ಕಿದೆ. ಕೀರ್ತಿ ಅವರು ‘ಅಂದೊಂದಿತ್ತು ಕಾಲ’ ಚಿತ್ರ ನಿರ್ದೇಶಿಸಿದ್ದಾರೆ.

ಈ ಮೊದಲು ವಿನಯ್ ರಾಜ್ಕುಮಾರ್ ನಟಿಸಿದ್ದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕೂಡ ಕ್ಲಾಸ್ ಆಗಿ ಮೂಡಿಬಂದಿತ್ತು. ಅದೇ ರೀತಿ ಈಗ ‘ಅಂದೊಂದಿತ್ತು ಕಾಲ’ ಸಿನಿಮಾ ಕ್ಲಾಸ್ ಪ್ರೇಕ್ಷಕರಿಗೆ ಇಷ್ಟ ಆಗಿದೆ.




