
ನಟಿ ರಶ್ಮಿಕಾ ಮಂದಣ್ಣ ಅವರು ಯಾವಾಗಲೂ ಕ್ಯೂಟ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುವ ಕೆಲಸ ಮಾಡುತ್ತಾರೆ. ಈಗ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ರಶ್ಮಿಕಾ ಮಂದಣ್ಣ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್. ಈ ಕಾರಣದಿಂದ ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ. ರಶ್ಮಿಕಾ ಫೋಟೋ ಹಾಗೂ ರೀಲ್ಸ್ ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಾರೆ.

ರಶ್ಮಿಕಾ ವಿವಿಧ ಎಕ್ಸ್ಪ್ರೆಷನ್ನಲ್ಲಿ ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ‘ಇಷ್ಟೆಲ್ಲ ಕ್ಯೂಟ್ ಆಗಿ ಕಾಣಿಸಿಕೊಂಡರೆ ಹೇಗೆ’ ಎಂದು ಕಮೆಂಟ್ ಮಾಡಿದ್ದಾರೆ. ಈ ಫೋಟೋಗಳು ಅಭಿಮಾನಿಗಳಿಗೆ ತುಂಬಾನೇ ಇಷ್ಟ ಆಗಿದೆ.

ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಾಕುವ ಉದ್ದೇಶದಿಂದಲೇ ರಶ್ಮಿಕಾ ಮಂದಣ್ಣ ಅವರು ಫೋಟೋಶೂಟ್ ಮಾಡಿಸುತ್ತಾರೆ. ಎಲ್ಲಾ ಫೋಟೋಗಳಿಗೂ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತವೆ. ಅವರ ಸೆಲ್ಫಿ ಫೋಟೋಗಳನ್ನು ಕೂಡ ಇಷ್ಟಪಡುವವರು ಇದ್ದಾರೆ. ವಿವಿಧ ರೀಲ್ಸ್ಗಳನ್ನು ಕೂಡ ರಶ್ಮಿಕಾ ಪೋಸ್ಟ್ ಮಾಡುತ್ತಾರೆ.

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಬಲು ಬ್ಯುಸಿ. ಅವರ ನಟನೆಯ ‘ಥಮ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ದೀಪಾವಳಿಯಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ. ಇದು ಹಾರರ್, ಕಾಮಿಡಿ ಸಿನಿಮಾ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.