ರೋಮ್​​​ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್

Updated on: Dec 30, 2025 | 3:06 PM

ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ವಿದೇಶದಲ್ಲಿ ಇದ್ದಾರೆ. ಹೊಸ ವರ್ಷದ ಆಚರಣೆಗೆ ಅವರು ರೋಮ್​​ಗೆ ತೆರಳಿದ್ದಾರೆ. ಅವರ ಜೊತೆ ಗೆಳೆಯರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿಜಯ್ ದೇವರಕೊಂಡ ಕೂಡ ಇದ್ದರು. ಮದುವೆಗೂ ಮೊದಲು ತೆರಳಿದ ಟ್ರಿಪ್ ಇದಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

1 / 5
ರಶ್ಮಿಕಾ ಮಂದಣ್ಣ ಅವರು ಸದ್ಯ ರೋಮ್​​ನಲ್ಲಿ ಇದ್ದಾರೆ. ಅಲ್ಲಿ ಅವರು ಗೆಳೆಯರ ಜೊತೆ ಸುತ್ತಾಡುತ್ತಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

2 / 5
ರಶ್ಮಿಕಾ ಮಂದಣ್ಣ ಅವರು ಹೂಗುಚ್ಛ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಹೂವುಗಳನ್ನು ಅವರಿಗೆ ನೀಡಿದ್ದು ವಿಜಯ್ ದೇವರಕೊಂಡ ಎನ್ನಲಾಗುತ್ತಿದೆ. ಆದರೆ, ವಿಜಯ್ ಅವರು ಈ ಬಗ್ಗೆ ಯಾವುದೇ ಪೋಸ್ಟ್​ ಹಾಕಿಲ್ಲ. ಆದರೆ, ರಶ್ಮಿಕಾ ಜೊತೆ ವಿಜಯ್ ಇದ್ದಾರೆ ಎಂದು ಫ್ಯಾನ್ಸ್ ಬಲವಾಗಿ ನಂಬಿದ್ದಾರೆ.

3 / 5
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಜೊತೆ ವಿಜಯ್ ಕೂಡ ಇದ್ದರು ಎಂಬುದನ್ನು ತಿಳಿಸಲು ಈ ಫೋಟೋ ದೊಡ್ಡ ಸಾಕ್ಷಿ ಒದಗಿಸಿದೆ. ವಿಜಯ್ ಹಾಗೂ ರಶ್ಮಿಕಾ ಈವರೆಗೆ ಒಟ್ಟಾಗಿರೋ ಫೋಟೋ ಪೋಸ್ಟ್ ಮಾಡಿಲ್ಲ.

4 / 5
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಆರಂಭಿಸಿ ಬಹಳ ವರ್ಷಗಳೇ ಕಳೆದಿವೆ. ಆದರೆ, ಇವರು ಈ ವಿಷಯವನ್ನು ಈವರೆಗೆ ಒಪ್ಪಿಕೊಂಡಿಲ್ಲ. ಇಬ್ಬರೂ ಈಗಾಗಲೇ ಅನೇಕ ಕಡೆಗಳಲ್ಲಿ ಒಟ್ಟಾಗಿ ತೆರಳಿದ್ದಾರೆ. ಇವರ ವಿವಾಹಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

5 / 5
ಫೆಬ್ರವರಿ 26ರಂದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಜೈಪುರದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಆಪ್ತರು, ಕುಟುಂಬದವರು ಮಾತ್ರ ಭಾಗಿ ಆಗಲಿದ್ದಾರೆ. ವಿವಾಹದ ಬಳಿಕ ರಶ್ಮಿಕಾ ಸಿನಿಮಾ ಕೆಲಸಗಳಲ್ಲಿ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.