ಅಪರೂಪದ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ; ಖುಷಿ ಹಂಚಿಕೊಂಡ ಕೊಡಗಿನ ಹುಡುಗಿ

| Updated By: ರಾಜೇಶ್ ದುಗ್ಗುಮನೆ

Updated on: Mar 01, 2022 | 2:36 PM

ರಶ್ಮಿಕಾ ನಟನೆಯ ‘ಪುಷ್ಪ’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ತೆರೆಕಂಡು ಯಶಸ್ಸು ಕಂಡಿದೆ. ‘ಗುಡ್ಬೈ’ ಹಾಗೂ ‘ಮಿಷನ್ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

1 / 6
ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ಅವರು ನಂತರ ಟಾಲಿವುಡ್​, ಕಾಲಿವುಡ್​ ಹಾಗೂ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಅಲ್ಲು ಅರ್ಜುನ್​, ಮಹೇಶ್​ ಬಾಬು, ಸಿದ್ದಾರ್ಥ್​ ಮಲ್ಹೋತ್ರ, ಅಮಿತಾಭ್​ ಬಚ್ಚನ್​ ಮೊದಲಾದ ಸ್ಟಾರ್​ ನಟರ ಜತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಇದರಿಂದ ರಶ್ಮಿಕಾ ವೃತ್ತಿ ಜೀವನಕ್ಕೆ ಹೆಚ್ಚು ಮೈಲೇಜ್​ ಸಿಕ್ಕಿದೆ.

2 / 6
ಶರ್ವಾನಂದ್ ಹಾಗೂ ರಶ್ಮಿಕಾ ಮಂದಣ್ಣ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ತಿರುಮಲ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರದಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಹಲವು ಮಾಧ್ಯಮಗಳಿಗೆ ರಶ್ಮಿಕಾ ಸಂದರ್ಶನ ನೀಡುತ್ತಿದ್ದಾರೆ. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.

3 / 6
‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರದಲ್ಲಿ ನಟಿಸಿದ್ದು ಒಂದು ಅಪರೂಪದ ಅವಕಾಶ ಎನ್ನುವ ಅಭಿಪ್ರಾಯವನ್ನು ರಶ್ಮಿಕಾ ವ್ಯಕ್ತಪಡಿಸಿದ್ದಾರೆ. ಚಿತ್ರದ ನಾಯಕ ಮದುವೆ ಆಗೋಕೆ ಪ್ರಯತ್ನಿಸುತ್ತಿರುತ್ತಾನೆ. ಆದರೆ, ಅದು ಸಾಧ್ಯವಾಗುತ್ತಿರುವುದಿಲ್ಲ. ಇಡೀ ಸಿನಿಮಾ ಇದೇ ಡ್ರಾಮಾ ಮೇಲೆ ಸಾಗಲಿದೆ. ಶರ್ವಾನಂದ್ ಜತೆ ತೆರೆಹಂಚಿಕೊಂಡಿದ್ದು ರಶ್ಮಿಕಾಗೆ ಖುಷಿ ನೀಡಿದೆ.

4 / 6
‘ಶರ್ವಾನಂದ್ ಅವರೊಂದಿಗೆ ತೆರೆಹಂಚಿಕೊಂಡಿದ್ದು ಖುಷಿ ಇದೆ. ‘ಪುಷ್ಪ’ ಸಿನಿಮಾದ ಶೂಟಿಂಗ್​ ಕಾಡಿನಲ್ಲಿ ನಡೆದಿತ್ತು. ಆ ಬಳಿಕ ‘ಆಡವಾಳ್ಳು ಮೀಕು ಜೋಹಾರ್ಲು’  ನಟಿಸಿದ್ದು ದೊಡ್ಡ ರಿಲೀಫ್​ ಎನಿಸಿತ್ತು. ಈ ಸಿನಿಮಾದ ಸೆಟ್​ನಲ್ಲಿ ಸಮಯ ಕಳೆದಿದ್ದು, ಪಿಕ್ನಿಕ್ ಮಾಡಿದಂತಿತ್ತು. ಶರ್ವಾನಂದ್​ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರು ಮನೆಯಲ್ಲೇ ಮಾಡಿದ ಅಡುಗೆಯನ್ನು ನನಗೂ ತರುತ್ತಿದ್ದರು. ಶೂಟಿಂಗ್ ಸಮಯದಲ್ಲಿ ನಾವು ತುಂಬಾ ಎಂಜಾಯ್ ಮಾಡಿದೆವು. ಈ ರೀತಿಯ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಗೋದು ತುಂಬಾನೇ ಅಪರೂಪ’ ಎಂದಿದ್ದಾರೆ ರಶ್ಮಿಕಾ.

5 / 6
ರಶ್ಮಿಕಾ ನಟನೆಯ ‘ಪುಷ್ಪ’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ತೆರೆಕಂಡು ಯಶಸ್ಸು ಕಂಡಿದೆ. ‘ಗುಡ್​ಬೈ’ ಹಾಗೂ ‘ಮಿಷನ್​ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಅವರು ಸದ್ಯ, ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ‘ಪುಷ್ಪ 2’ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ.

6 / 6
ರಶ್ಮಿಕಾ

ರಶ್ಮಿಕಾ