
ರಶ್ಮಿಕಾ ಮಂದಣ್ಣ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಕನ್ನಡದಿಂದ ಶುರುವಾದ ಅವರ ಜರ್ನಿ ಈಗ ಬಾಲಿವುಡ್ವರೆಗೆ ಹೋಗಿ ನಿಂತಿದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ನೀಡಿದ್ದಾರೆ.

ರಶ್ಮಿಕಾ ಬಗ್ಗೆ ಒಳ್ಳೆಯ ಮಾತನಾಡುವುದರ ಜೊತೆಗೆ ಅವರನ್ನು ಟ್ರೋಲ್ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ನೆಗೆಟಿವಿಟಿ ಡೀಲ್ ಮಾಡೋದು ಅವರಿಗೆ ದೊಡ್ಡ ಚಾಲೆಂಜ್. ಇದನ್ನು ಹೇಗೆ ಡೀಲ್ ಮಾಡ್ತಾರೆ ಎಂಬುದನ್ನು ಅವರು ಹೇಳಿದ್ದಾರೆ.

‘ನೆಗೆಟಿವ್ ವ್ಯಕ್ತಿಗಳ ಜೊತೆ ಹೇಗೆ ಡೀಲ್ ಮಾಡ್ತೀರಾ? ಯಾವುದಾದರೂ ಟಿಪ್ಸ್ ಇದೆಯಾ?’ ಎಂದು ಅಭಿಮಾನಿಯೋರ್ವ ರಶ್ಮಿಕಾಗೆ ಪ್ರಶ್ನೆ ಮಾಡಿದ್ದ. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಸಾಕಷ್ಟು ಪ್ರೀತಿ ನೀಡಿ. ಆಗ ಅವರ ನೆಗೆಟಿವಿ ಪ್ರೀತಿ ಆಗಿ ಬದಲಾಗುತ್ತದೆ’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಈ ಟ್ವೀಟ್ನ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಹಾಗೂ ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ.
Published On - 2:45 pm, Tue, 21 March 23