Updated on: Mar 21, 2023 | 9:24 PM
ಇಂಡಿಯನ್ ಪ್ರೀಮಿಯರ್ ಲೀಗ್ನ 2023ರ ಆವೃತಿಗಾಗಿ ಈಗಾಗಲೇ 8 ತಂಡಗಳು ತಮ್ಮ ಹೊಸ ಜೆರ್ಸಿಗಳನ್ನು ಅನಾವರಣಗೊಳಿಸಿದೆ. ಎಲ್ಲಾ ತಂಡಗಳು ಈ ಬಾರಿ ಕೂಡ ತಮ್ಮ ಟ್ರೇಡ್ ಮಾರ್ಕ್ ಬಣ್ಣಗಳನ್ನು ಉಳಿಸಿಕೊಂಡಿದ್ದು, ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದೆ. ಇದಾಗ್ಯೂ ಲಕ್ನೋ ಸೂಪರ್ ಜೈಂಟ್ಸ್ ಮಾತ್ರ ಹೊಸ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ರಾಜಸ್ಥಾನ್ ರಾಯಲ್ಸ್ ತಂಡವು ತಮ್ಮ ಹಿಂದಿನ ಪಿಂಕ್ ಜೆರ್ಸಿಯನ್ನೇ ಈ ಬಾರಿ ಕೂಡ ಮುಂದುವರೆಸಿದೆ. ಆದರೆ ಕಳೆದ ಸೀಸನ್ನಲ್ಲಿದ್ದ ಬ್ಲೂ ಶೋಲ್ಡರ್ ಬಣ್ಣದ ಬದಲಾಗಿ ಈ ಬಾರಿ ಪಿಂಕ್ ಮಿಶ್ರಿತ ನೀಲಿ ಬಣ್ಣವನ್ನು ಬಳಸಲಾಗಿದೆ. ಇದರ ಹೊರತಾಗಿ ತಂಡದ ಪ್ರಾಯೋಜಕತ್ವದಲ್ಲಿ ಮಾತ್ರ ಬದಲಾವಣೆಯಾಗಿದೆ ಎನ್ನಬಹುದು.
ಮುಂಬೈ ಇಂಡಿಯನ್ಸ್ ತನ್ನ ಹೊಸ ಬ್ಲೂ ಜೆರ್ಸಿಯ ಮೇಲ್ಮೈ ವಿನ್ಯಾಸದೊಳಗೆ, ಮುಂಬೈ ನಗರ, ಇತಿಹಾಸ-ಪರಂಪರೆ, ಟ್ಯಾಕ್ಸಿ, ಗೇಟ್ ವೇ ಆಫ್ ಇಂಡಿಯಾದ ಚಿತ್ರಣಗಳನ್ನು ಬಳಸಿರುವುದು ವಿಶೇಷ.
ಕಳೆದ ಸೀಸನ್ನಲ್ಲಿ ಸಂಪೂರ್ಣ ಆರೆಂಜ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಎಸ್ಆರ್ಹೆಚ್ ತಂಡವು ಈ ಸಲ, ಆರೆಂಜ್ ಹಾಗೂ ಬ್ಲ್ಯಾಕ್ ಬಣ್ಣಗಳಲ್ಲಿ ಕಿಟ್ ಅನ್ನು ರೂಪಿಸಿದೆ. ಇಲ್ಲಿ ತಂಡದ ಜೆರ್ಸಿಯು ಆರೆಂಜ್ ಬಣ್ಣದಲ್ಲಿದ್ದರೆ, ಪ್ಯಾಂಟ್ಗೆ ಕಪ್ಪು ಬಣ್ಣ ನೀಡಲಾಗಿದೆ. ಹಾಗೆಯೇ ಭುಜದ ಮೇಲೆ ಕಪ್ಪು ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.
ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಜೆರ್ಸಿಯ ಬಣ್ಣವನ್ನೇ ಬದಲಿಸಿದೆ. ಕಳೆದ ಬಾರಿಯಿದ್ದ ಆಕ್ವಾ ಮೆರೈನ್ ಬ್ಲೂ ಜೆರ್ಸಿಯ ಬದಲಿಗೆ ಈ ಬಾರಿ ಕಡು ನೀಲಿ ಬಣ್ಣದ ಸಮವಸ್ತ್ರದಲ್ಲಿ ಲಕ್ನೋ ಕಣಕ್ಕಿಳಿಯಲಿದೆ. ಇನ್ನು ಹೊಸ ಜೆರ್ಸಿಗೆ ಕಡು ನೀಲಿ ಜೊತೆ ಕೆಂಪು ಬಣ್ಣದ ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.
ಗುಜರಾತ್ ಟೈಟಾನ್ಸ್ ತಂಡವು ಕಳೆದ ಬಾರಿಯ ಜೆರ್ಸಿಯನ್ನು ಮರುವಿನ್ಯಾಸಗೊಳಿಸಿದೆ. ಇಲ್ಲಿ ತಂಡದ ಲೋಗೋದ ಮೇಲೆ ಚಾಂಪಿಯನ್ ಪಟ್ಟಕ್ಕೇರಿರುವುದನ್ನು ಪ್ರತಿನಿಧಿಸುವಂತೆ ಸ್ಟಾರ್ ನೀಡಲಾಗಿದೆ. ಹಾಗೆಯೇ ಜೆರ್ಸಿಯ ಕಾಲರ್ ವಿನ್ಯಾಸ ಬದಲಿಸಲಾಗಿದ್ದು, ಇದರ ಹೊರತಾಗಿ ತಂಡದ ಸಮವಸ್ತ್ರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿಲ್ಲ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಕಳೆದ ಬಾರಿ ಎಡಬದಿಗೆ ನೀಡಲಾಗಿದ್ದ ಶೇಡ್ ಅನ್ನು ಈ ಬಾರಿ ತೋಳ್ಭಾಗದಲ್ಲಿ ನೀಡಿರುವುದು ವಿಶೇಷ. ಅಲ್ಲದೆ ಮುಂಭಾಗವು ನೀಲಿ ಬಣ್ಣದಲ್ಲಿದ್ದರೆ, ಹಿಂಭಾಗವನ್ನು ಕೆಂಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಸಲ ಕೂಡ ಯೆಲ್ಲೊ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಇನ್ನು ಕಳೆದ ಬಾರಿಯ ವಿನ್ಯಾಸವನ್ನೇ ಈ ಬಾರಿ ಕೂಡ ಮುಂದುವರೆಸಲಾಗಿದ್ದು, ಇದಾಗ್ಯೂ ಜೆರ್ಸಿ ಮುಂಭಾಗದ ಪ್ರಾಯೋಜಕತ್ವ ಬದಲಾಗಿದೆ.
ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ಜೆರ್ಸಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಮಾಡಲಾಗಿಲ್ಲ. ಕಳೆದ ಸೀಸನ್ನಲ್ಲಿ ವಿನ್ಯಾಸಗೊಳಿಸಲಾದ ಅದೇ ಮಾದರಿಯ ಜೆರ್ಸಿಯಲ್ಲಿ ಈ ಬಾರಿ ಕೂಡ ಕಣಕ್ಕಿಳಿಯಲಿದೆ.
ಸದ್ಯ 8 ತಂಡಗಳು ಮಾತ್ರ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು. ಇನ್ನು ಆರ್ಸಿಬಿ ಹಾಗೂ ಕೆಕೆಆರ್ ತಂಡಗಳು ಅಧಿಕೃತವಾಗಿ ತಮ್ಮ ಕಿಟ್ಗಳನ್ನು ಬಿಡುಗಡೆ ಮಾಡಬೇಕಿದೆ.