
ತಮಿಳು ಕಿರುತೆರೆಯಲ್ಲಿ ಫೇಮಸ್ ಆದವರು ಮಹಾಲಕ್ಷ್ಮಿ. ನಿರೂಪಕಿಯಾಗಿ ಹಾಗೂ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಎರಡನೇ ಮದುವೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಅವರು ಮದುವೆ ಆಗಿದ್ದಾರೆ. ಇದು ಇಬ್ಬರಿಗೂ ಎರಡನೇ ವಿವಾಹ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋಗಳು ವೈರಲ್ ಆಗಿವೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಅವರು ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ. ಏಕಾಏಕಿ ಮದುವೆ ಆಗುವ ಮೂಲಕ ಅವರಿಬ್ಬರು ಸರ್ಪ್ರೈಸ್ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ 32 ವರ್ಷ ವಯಸ್ಸು. 38ರ ಪ್ರಾಯದ ರವೀಂದರ್ ಚಂದ್ರಶೇಖರ್ ಜತೆ ಅವರ ಕಲ್ಯಾಣ ನೆರವೇರಿದೆ.

ಮುದ್ದಿನ ಪತ್ನಿ ಮಹಾಲಕ್ಷ್ಮಿಗೆ ರವೀಂದರ್ ಚಂದ್ರಶೇಖರ್ ಅವರು ದುಬಾರಿ ಗಿಫ್ಟ್ಗಳನ್ನು ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಗಿಫ್ಟ್ ಕುರಿತು ಹಬ್ಬಿರುವ ಗಾಸಿಪ್ ಬಗ್ಗೆ ಸದ್ಯಕ್ಕೆ ಈ ಜೋಡಿ ಪ್ರತಿಕ್ರಿಯೆ ನೀಡಿಲ್ಲ. ಆ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ನೆಟ್ಟಿಗರು ಕಾದಿದ್ದಾರೆ. ಇನ್ನೊಂದು ವರ್ಗದ ಜನರು ಈ ಜೋಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ.
Published On - 8:17 am, Thu, 8 September 22