
ನಟಿ ಆಶಿಕಾ ರಂಗನಾಥ್ ಅವರು ‘ರೇಮೊ’ ಚಿತ್ರದ ರಿಲೀಸ್ಗಾಗಿ ಕಾದಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಚಿತ್ರದ ಟ್ರೇಲರ್ ಸಾಕಷ್ಟು ಸದ್ದು ಮಾಡಿದೆ.

ಆಶಿಕಾ ರಂಗನಾಥ್ ಅವರು ಈ ಚಿತ್ರದಲ್ಲಿ ಖ್ಯಾತ ಸಿಂಗರ್ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ಪವನ್ ಒಡೆಯರ್ ಅವರು ನಿರ್ದೇಶನ ಮಾಡಿದ್ದಾರೆ. ‘ಗೂಗ್ಲಿ’ ಅಂತಹ ಸೂಪರ್ ಹಿಟ್ ಚಿತ್ರ ನೀಡಿದ ಖ್ಯಾತಿ ಅವರಿಗೆ ಇದೆ.

ಆಶಿಕಾ ರಂಗನಾಥ್ ಸದ್ಯ ‘ರೇಮೊ’ ಚಿತ್ರದ ಗುಂಗಿನಲ್ಲಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಆಶಿಕಾ ರಂಗನಾಥ್ ಅವರನ್ನು ಬರೋಬ್ಬರಿ 17 ಲಕ್ಷ ಮಂದಿ ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಿಸುತ್ತಿದ್ದಾರೆ. ಫ್ಯಾನ್ಸ್ಗಾಗಿ ಆಶಿಕಾ ವಿವಿಧ ರೀತಿಯಲ್ಲಿ ಫೋಟೋ ಶೂಟ್ ಮಾಡಿಸುತ್ತಾರೆ.

ಆಶಿಕಾಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಹಲವು ಆಫರ್ಗಳು ಅವರ ಕೈಯಲ್ಲಿವೆ. ಕಳೆದ ವರ್ಷ ಅವರ ನಟನೆಯ ‘ಮದಗಜ’ ಚಿತ್ರ ರಿಲೀಸ್ ಆಗಿತ್ತು.