Updated on: Nov 19, 2022 | 10:59 AM
ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದು, ಹಲವು ಚಿತ್ರಗಳಲ್ಲಿ ಬುಸ್ಯಿ ಆಗಿದ್ದಾರೆ. ಈ ನಡುವೆ ಶೂಟಿಂಗ್ ಸಂದರ್ಭದಲ್ಲಿ ಅವಘಡವೊಂದು ಸಂಭವಿಸಿದ್ದು, ಕೈಗೆ ಗಾಯ ಮಾಡಿಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿದ್ದ 'ನಾನೊಬ್ಬ ಭಾರತೀಯ' ಸಿನಿಮಾ ಶೂಟಿಂಗ್ ವೇಳೆ ರಾಗಿಣಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಕುರಿತಾಗಿ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಾಲ್ಕುದಿನ ಬೆಡ್ ರೆಸ್ಟ್ನಲ್ಲಿರಲು ಸೂಚಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಪ್ರತಿನಿತ್ಯ ಯೋಗ, ಜಿಮ್ ಮಾಡಿ ಫಿಟ್ ಆಗಿದ್ದಾರೆ.
ರಾಗಿಣಿಗೆ ಗಾಯವಾಗಿರುವುದನ್ನು ನೋಡಿದ ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದು, ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.