Republic Day 2023: ಗಣರಾಜ್ಯೋತ್ಸವ ಹಿನ್ನೆಲೆ ತ್ರಿವರ್ಣ ಬಣ್ಣದಲ್ಲಿ ಮಿನುಗುತ್ತಿವೆ ಸರ್ಕಾರಿ ಕಟ್ಟಡಗಳು, ಫೋಟೋಸ್ ಇವೆ
74ನೇ ಗಣರಾಜೋತ್ಸವ ಆಚರಣೆಗೆ ಇಡೀ ರಾಷ್ಟ್ರ ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದೆ. ದೇಶದ ಬಹುತೇಕ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದು ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದು ದೇಶ ಪ್ರೇಮ ಹೆಚ್ಚಿಸಿದೆ.
Updated on:Jan 26, 2023 | 8:16 AM

ಗಣರಾಜ್ಯೋತ್ಸವ ಹಿನ್ನೆಲೆ ಹೈದರಾಬಾದ್‌ನ ಪ್ರಸಿದ್ಧ ಚಾರ್ ಮಿನಾರ್ ತ್ರಿವರ್ಣ ಧ್ವಜದ ಬಣ್ಣಗಳಿಂದ ಮಿನುಗುತ್ತಿದೆ. ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತಿದೆ.

ರಾಜಸ್ಥಾನ ಜೈಪುರದಲ್ಲಿ ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿವೆ. ಇಲ್ಲಿನ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ತ್ರಿವರ್ಣ ಬಣ್ಣ ನೀಡಲಾಗಿದೆ.

ಪುದುಚೆರಿಯಲ್ಲೂ ಸರ್ಕಾರಿ ಕಟ್ಟಡಗಳಿಗೆ ತ್ರಿವರ್ಣ ರಂಗು ನೀಡಲಾಗಿದೆ. ಇಡೀ ನಗರ ದೇಶ ಪ್ರೇಮವನ್ನು ಬಡಿದಬ್ಬಿಸಿದಂತಿದೆ.

ಕೋಲ್ಕತ್ತಾದ ರಾಜಭವನವು ತ್ರಿವರ್ಣ ಬಣ್ಣಗಳಲ್ಲಿ ಮೇಲೈಸುತ್ತಿದೆ. ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, BMC ಪ್ರಧಾನ ಕಚೇರಿ ಸೇರಿದಮತೆ ಸರ್ಕಾರಿ ಕಟ್ಟಡಗಳು ತ್ರಿವರ್ಣ ಧ್ವಜದ ಬಣ್ಣದಲ್ಲಿ ಪ್ರಕಾಶಿಸುತ್ತಿವೆ.

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದ ಗಡಿಯಾರ ಗೋಪುರವು ತ್ರಿವರ್ಣ ಬಣ್ಣಗಳಿಂದ ಮಿನುಗುತ್ತಿರುವ ದೃಶ್ಯ.

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದ ಗಡಿಯಾರ ಗೋಪುರವು ತ್ರಿವರ್ಣ ಬಣ್ಣಗಳಿಂದ ಮಿನುಗುತ್ತಿರುವ ದೃಶ್ಯ.

ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದ ಗಡಿಯಾರ ಗೋಪುರವು ತ್ರಿವರ್ಣ ಬಣ್ಣಗಳಿಂದ ಮಿನುಗುತ್ತಿರುವ ದೃಶ್ಯ.
Published On - 8:16 am, Thu, 26 January 23




