ಕುಟುಂಬದ ಜೊತೆ ಗೋವಾದಲ್ಲಿ ಸಮಯ ಕಳೆದ ರಿಷಬ್; ಖಾಸಗಿ ಯಾಚ್​​ನಲ್ಲಿ ಸುತ್ತಾಟ

Updated on: Dec 31, 2025 | 1:15 PM

ರಿಷಬ್ ಶೆಟ್ಟಿ ಅವರಿಗೆ ಈ ವರ್ಷ ಸಾಕಷ್ಟು ವಿಶೇಷವಾಗಿತ್ತು. ಸತತ ಮೂರು ವರ್ಷ ಶ್ರಮ ಹಾಕಿ ಮಾಡಿದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬದ ಜೊತೆ ಗೋವಾಗೆ ತೆರಳಿದ್ದಾರೆ.

1 / 5
ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಫೇಮಸ್ ಆಗಿದ್ದಾರೆ. ಈ ಸಿನಿಮಾ ಸಾಕಷ್ಟು ಗಮನ ಸೆಳೆದಿದೆ. ಈ ಸಿನಿಮಾಗಾಗಿ ರಿಷಬ್ ಅವರು ಸಾಕಷ್ಟು ಬೆವರು ಹರಿಸಿದ್ದಾರೆ. ಸಿನಿಮಾ ರಿಲೀಸ್ ಆದ ಬಳಿಕ ಅವರು ಒಂದು ಬ್ರೇಕ್​​ನಲ್ಲಿ ಇದ್ದಾರೆ.

2 / 5
ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳ ಜೊತೆ ಖಾಸಗಿ ಯಾಚ್​​ನಲ್ಲಿ ಗೋವಾ ಸಮುದ್ರ ವಿಹಾರ ಮಾಡಿದ್ದಾರೆ. ಈ ವೇಳೆ ಖುಷಿ ಖುಷಿಯಿಂದ ಫ್ಯಾಮಿಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

3 / 5
ರಿಷಬ್ ಶೆಟ್ಟಿ ಅವರು ಕುಟುಂಬಕ್ಕೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಈಗ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ಹಾಯಾಗಿ ಸುತ್ತಾಡಿಕೊಂಡಿದ್ದಾರೆ.

4 / 5
ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ಗೋವಾಗೆ ತೆರಳಲು ಇಷ್ಟಪಡುತ್ತಾರೆ. ಅಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸುತ್ತಾರೆ. ಸೆಲೆಬ್ರಿಟಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ರಿಷಬ್ ಅವರು ವರ್ಷಾಂತ್ಯದ ಸಂದರ್ಭದಲ್ಲಿ ಗೋವಾದಲ್ಲೇ ಇದ್ದರು.

5 / 5
ಪ್ರಗತಿ ಶೆಟ್ಟಿ ಅವರು ರಿಷಬ್​ ಅವರ ಪ್ರತಿ ಹಂತವನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಅವರು ಈಗ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅವರೇ ವಸ್ತ್ರ ವಿನ್ಯಾಸ ಮಾಡಿದ್ದರು. ಇದಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ.