‘ಆರ್ಆರ್ಆರ್’ ಸಿನಿಮಾದಲ್ಲಿ ಸೀತಾ ಪಾತ್ರ ಮಾಡಿರುವ ನಟಿ ಆಲಿಯಾ ಭಟ್ ಅವರು ಆ ಚಿತ್ರದ ರಿಲೀಸ್ಗಾಗಿ ಕಾದಿದ್ದಾರೆ. 2022ರ ಜ.7ರಂದು ‘ಆರ್ಆರ್ಆರ್’ ಬಿಡುಗಡೆ ಆಗಲಿದೆ.
ಹೊಸ ಫೋಟೋಶೂಟ್ ಮೂಲಕ ಆಲಿಯಾ ಭಟ್ ಕಂಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಆಲಿಯಾ ಭಟ್ ಬಹುಬೇಡಿಕೆಯ ನಟಿ ಆಗಿದ್ದಾರೆ. ‘ಆರ್ಆರ್ಆರ್’ ಸಿನಿಮಾದಿಂದಾಗಿ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಮಿಂಚುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಇದು ಅವರ ಮೊದಲ ಸಿನಿಮಾ.
ರಣಬೀರ್ ಕಪೂರ್ ಜತೆ ಆಲಿಯಾ ಭಟ್ ಅವರು ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಆ ಬಗ್ಗೆ ಅವರು ಕನ್ನಡದಲ್ಲೇ ಟ್ವೀಟ್ ಮಾಡಿ ಗಮನ ಸೆಳೆದಿದ್ದರು.
ಶೀಘ್ರದಲ್ಲೇ ಆಲಿಯಾ ಭಟ್ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ. ನಟ ರಣಬೀರ್ ಕಪೂರ್ ಜತೆ ಅವರು ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ.