
ಶಿವರಾಜ್ಕುಮಾರ್ ನಟನೆಯ, ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಕನ್ನಡದಲ್ಲಿ ಗುರುತಿಸಿಕೊಳ್ಳುತ್ತಿರುವ ರುಕ್ಮಿಣಿ ವಸಂತ್ ಈ ಚಿತ್ರಕ್ಕೆ ನಾಯಕಿ ಆಗಿ ಫೈನಲ್ ಆಗಿದ್ದಾರೆ.

ಇತ್ತೀಚೆಗೆ ‘ಭೈರತಿ ರಣಗಲ್’ ತಂಡ ಈ ಬಗ್ಗೆ ಘೋಷಣೆ ಮಾಡಿದೆ. ಈ ಫೋಟೋನ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ.

ರುಕ್ಮಿಣಿ ವಸಂತ್ ಅವರಿಗೆ ಬೇಡಿಕೆ ಸೃಷ್ಟಿ ಆಗುತ್ತಿದೆ. ಗಣೇಶ್ ನಟನೆಯ ‘ಬಾನದಾರಿಯಲ್ಲಿ’ ಚಿತ್ರಕ್ಕೆ ರುಕ್ಮಿಣಿ ನಾಯಕಿ. ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ.

ಇದಲ್ಲದೆ, ಇನ್ನೂ ಕೆಲವು ಸಿನಿಮಾಗಳು ರುಕ್ಮಿಣಿ ಅವರ ಕೈಯಲ್ಲಿವೆ. ವಿಜಯ್ ಸೇತುಪತಿ 51ನೇ ಚಿತ್ರಕ್ಕೆ ರುಕ್ಮಿಣಿ ಹೀರೋಯಿನ್.

ರುಕ್ಮಿಣಿ ಅವರಿಗೆ ದಿನ ಕಳೆದಂತೆ ಬೇಡಿಕೆ ಹೆಚ್ಚುತ್ತಿದೆ. ಅವರು ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ.