
ಸಾಯಿ ಪಲ್ಲವಿಯ ಸಹೋದರಿ ಪೂಜಾ ಕನ್ನನ್ ತಮ್ಮ ಬಾಯ್ಫ್ರೆಂಡ್ ಜೊತೆಗೆ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪೂಜಾ ಕನ್ನನ್, ತಮ್ಮ ಬಾಯ್ಫ್ರೆಂಡ್ ವಿನೀತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿನೀತ್ ಹಾಗೂ ಪೂಜಾ ಹಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು.

ಸಾಯಿ ಪಲ್ಲವಿ, ತಮ್ಮ ಸಹೋದರಿ ಪೂಜಾರ ನಿಶ್ಚಿತಾರ್ಥದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಹಾಡಿ ಕುಣಿದು ನರ್ತಿಸಿದ್ದಾರೆ.

ಸಹೋದರಿಯ ನಿಶ್ಚಿತಾರ್ಥದ ಹಲವು ಚಿತ್ರಗಳನ್ನು ನಟಿ ಸಾಯಿ ಪಲ್ಲವಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಗಳಲ್ಲಿ ಸಾಯಿ ಪಲ್ಲವಿ, ಸಹೋದರಿಯೊಟ್ಟಿಗೆ ಆತನ ಭಾವಿ ಪತಿಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಸಾಯಿ ಪಲ್ಲವಿಯವರ ಕುಟುಂಬ ಸಹೋದರಿಯ ಭಾವಿ ಪತಿಯ ಕುಟುಂಬದವರು ವಿವಿಧ ಆಟಗಳನ್ನು ಆಡಿ ಖುಷಿ ಪಟ್ಟಿದ್ದಾರೆ.

ತನ್ನ ಸಹೋದರಿಯ ಬಗ್ಗೆ ಎಚ್ಚರದಿಂದ ಇರುವಂತೆ ಪೂಜಾರ ಭಾವಿ ಪತಿಗೆ ಸಲಹೆ ನೀಡಿರುವ ಸಾಯಿ ಪಲ್ಲವಿ ವಿನೀತ್ರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.