ವಿಜಯ್ ಸೇತುಪತಿ ಹಾಗೂ ಮಾಧವನ್ ನಟಿಸಿದ್ದ ‘ವಿಕ್ರಮ್ ವೇದ’ ಸೂಪರ್ ಹಿಟ್ ಆಗಿತ್ತು. ಹಲವು ವರ್ಷಗಳ ನಂತರ ಈ ಚಿತ್ರ ಬಾಲಿವುಡ್ಗೆ ಅದೇ ಹೆಸರಿನಲ್ಲಿ ರಿಮೇಕ್ ಆಗುತ್ತಿದೆ.
ಹೃತಿಕ್ ರೋಷನ್ ವಿಜಯ್ ಸೇತುಪತಿ ಮಾಡಿದ್ದ ‘ವೇದ’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಅವರ ಲುಕ್ ವೈರಲ್ ಆಗಿತ್ತು.
ಇದೀಗ ಸ್ವತಃ ಹೃತಿಕ್ ‘ವಿಕ್ರಮ್’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೈಫ್ ಅಲಿ ಖಾನ್ ಅವರ ಖಡಕ್ ಅವತಾರವನ್ನು ರಿವೀಲ್ ಮಾಡಿದ್ದಾರೆ.
ಈ ಹಿಂದೆ ‘ಸೇಕ್ರೆಡ್ ಗೇಮ್ಸ್’ನಲ್ಲಿ ಪೊಲೀಸ್ ಆಗಿ ಮಿಂಚಿದ್ದ ಸೈಫ್, ಇಲ್ಲೂ ಮಾಸ್ ಆಗಿ ಕಾಣಿಸಿಕೊಂಡಿದ್ದು, ನಿರೀಕ್ಷೆ ಹೆಚ್ಚಿಸಿದ್ದಾರೆ.
ಹೃತಿಕ್ ಹಾಗೂ ಸೈಫ್ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದು, ಪೋಸ್ಟರ್ಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.