ಸಮಂತಾ ಹಾಗೂ ವರುಣ್ ಧವನ್ ನಟನೆಯ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿ ನಾಳೆ ಅಂದರೆ ನವೆಂಬರ್ 07 ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.
ಇಬ್ಬರು ಸ್ಟಾರ್ ನಟರಾದ ಸಮಂತಾ ಮತ್ತು ವರುಣ್ ಧವನ್ ಒಟ್ಟಿಗೆ ನಟಿಸಿರುವ ಈ ವೆಬ್ ಸರಣಿಯ ಮೇಲೆ ಭಾರಿ ನಿರೀಕ್ಷೆಗಳಿವೆ. ಪ್ರಚಾರವೂ ಸಹ ಜೋರಾಗಿಯೇ ನಡೆದಿದೆ.
ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ‘ಸಿಟಾಡೆಲ್: ಹನಿ-ಬನಿ’ ವೆಬ್ ಸರಣಿಯ ಪ್ರಚಾರ ನಡೆಯುತ್ತಲೇ ಇದೆ. ವೆಬ್ ಸರಣಿ ತಂಡ ಲಂಡನ್ಗೆ ಸಹ ಹೋಗಿ ಬಂದಿದೆ.
ಇದೀಗ ‘ಸಿಟಾಡೆಲ್’ ಪ್ರಚಾರಕ್ಕೆಂದು ವರುಣ್ ಧವನ್ ಹಾಗೂ ಸಮಂತಾ ಫೋಟೊಶೂಟ್ ಮಾಡಿಸಿದ್ದಾರೆ. ಚಿತ್ರಗಳು ಅಮೆಜಾನ್ ಪ್ರೈಂ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.
‘ಸಿಟಾಡೆಲ್: ಹನಿ ಬನಿ’ ಚಿತ್ರೀಕರಣ ಪ್ರಾರಂಭವಾಗಿ ಮೂರು ವರ್ಷಗಳಾದ ಬಳಿಕ ಈಗ ವೆಬ್ ಸರಣಿ ಬಿಡುಗಡೆ ಆಗುತ್ತಿದೆ. ಹಾಗಾಗಿ ಇದರ ಮೇಲೆ ನಿರೀಕ್ಷೆ ಹೆಚ್ಚಿದೆ.
ಇದೇ ‘ಸಿಟಾಡೆಲ್’ ಇಂಗ್ಲೀಷ್ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್ ನಟ ರಿಚರ್ಡ್ ಮ್ಯಾಡನ್ ನಟಿಸಿದ್ದರು. ಅದು ದೊಡ್ಡ ಸದ್ದು ಮಾಡಲಿಲ್ಲ.
ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ ‘ಸಿಟಾಡೆಲ್’ನ ಪ್ರೀಮಿಯರ್ ನಡೆದಿದ್ದು, ಕೆಲ ಎಪಿಸೋಡ್ ನೋಡಿದ ಸೆಲೆಬ್ರಿಟಿಗಳು ಶೋ ಅನ್ನು ಇಷ್ಟಪಟ್ಟಿದ್ದಾರೆ.