Updated on: Mar 29, 2023 | 8:37 AM
ನಟಿ ಸಮಂತಾ ಅವರು ಟಾಲಿವುಡ್ನ ಬೇಡಿಕೆಯ ನಟಿ. ಇದರ ಜೊತೆಗೆ ವೆಬ್ ಸೀರಿಸ್ ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ಈಗ ಸಮಂತಾ ಅವರು ಸಂಭಾವನೆ ವಿಚಾರವಾಗಿ ಮಾತನಾಡಿದ್ದಾರೆ.
ಸಮಂತಾ ಅವರು ಮರಸುತ್ತುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಪಾತ್ರಕ್ಕೆ ತೂಕ ಇರುವ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳನ್ನು ಸಮಂತಾ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ, ದೊಡ್ಡ ಸಂಭಾವನೆ ಪಡೆಯುತ್ತಾರೆ.
ಸಂಭಾವನೆ ವಿಚಾರದಲ್ಲಿ ಸಮಂತಾ ಈಗ ಮಾತನಾಡಿದ್ದಾರೆ. ‘ಹೆಚ್ಚಿನ ಸಂಭಾವನೆ ಪಡೆಯಲು ನಾನು ಹೋರಾಡುತ್ತಿದ್ದೇನೆ. ಹಾಗಂತ, ಹೀರೋಗಳಷ್ಟೇ ಸಂಭಾವನೆ ಪಡೆಯುತ್ತೇನೆ ಎಂದಲ್ಲ. ನಿರ್ಮಾಪಕರೇ ಬಂದು ಹೌದು, ನಾವು ನಿಮಗೆ ಇಷ್ಟು ಪಾವತಿಸಲು ಬಯಸುತ್ತೇವೆ ಎಂದು ಹೇಳಬೇಕು. ಅದಕ್ಕಾಗಿ ನಾನು ಬೇಡಬೇಕಾಗಿಲ್ಲ. ಆದರೆ, ಇದಕ್ಕೆ ಪರಿಶ್ರಮ ಬೇಕು’ ಎಂದಿದ್ದಾರೆ ಸಮಂತಾ.
ಸಮಂತಾ, ರಶ್ಮಿಕಾ ಮಂದಣ್ಣ ಸೇರಿ ಅನೇಕ ಹೀರೋಯಿನ್ಗಳು ಕೋಟಿ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ. ಇದು ಅವರ ಪರಿಶ್ರಮಕ್ಕೆ ಸಿಕ್ಕ ಫಲ ಎಂಬುದು ಅನೇಕರ ಅಭಿಪ್ರಾಯ.
ಸಮಂತಾ Myositis ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗ ವಿಶ್ರಾಂತಿ ಪಡೆದು ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.