‘ಗೌರಿ’ ಸಿನಿಮಾದಲ್ಲಿನ ಅಭಿನಯಕ್ಕೆ ಸೈಮಾ ಪ್ರಶಸ್ತಿ ಪಡೆದ ಸಮರ್ಜಿತ್ ಲಂಕೇಶ್

Updated on: Sep 07, 2025 | 1:19 PM

ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಬಾರಿ ಸಮರ್ಜಿತ್ ಲಂಕೇಶ್ ಅವರು ಪ್ರಶಸ್ತಿ ಪಡೆದಿದ್ದಾರೆ. ‘ಗೌರಿ’ ಸಿನಿಮಾದಲ್ಲಿನ ಚೊಚ್ಚಲ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ. ಇದರಿಂದ ಸಮರ್ಜಿತ್ ಲಂಕೇಶ್ ಅವರಿಗೆ ದೊಡ್ಡ ಪ್ರೋತ್ಸಾಹ ಸಿಕ್ಕಂತಾಗಿದೆ. ಪ್ರಶಸ್ತಿ ಹಿಡಿದು ಅವರು ಖುಷಿಯಿಂದ ಪೋಸ್ ನೀಡಿದ್ದಾರೆ.

1 / 5
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ‘ಸೈಮಾ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಗೌರಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ ಅವರಿಗೆ ಈ ಅವಾರ್ಡ್ ನೀಡಲಾಗಿದೆ.

2 / 5
‘ಗೌರಿ’ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್ ಅವರು ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ಅವರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡು ಗಮನ ಸೆಳೆದಿದ್ದಾರೆ.

3 / 5
ದುಬೈನಲ್ಲಿ 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ (SIIMA) ಸಮಾರಂಭ ನಡೆದಿದೆ. ಚಿತ್ರರಂಗ ಹಲವು ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಸಮರ್ಜಿತ್ ಅವರು ಅವಾರ್ಡ್ ಹಿಡಿದು ಸಂಭ್ರಮಿಸಿದ್ದಾರೆ.

4 / 5
ತಂದೆ ನಿರ್ದೇಶಕನಾಗಿದ್ದರೂ ಕೂಡ ಸಮರ್ಜಿತ್ ಅವರು ಸುಮ್ಮನೇ ಚಿತ್ರರಂಗಕ್ಕೆ ಬಂದಿಲ್ಲ. ಸಾಕಷ್ಟು ತಯಾರಿ ಮಾಡಿಕೊಂಡು ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅದರ ಫಲವಾಗಿ ಪ್ರಶಸ್ತಿ ಅವರ ಕೈ ಸೇರಿದೆ.

5 / 5
‘ಎಲ್ಲರಿಗೂ ಧನ್ಯವಾದಗಳು. ಬೆಂಬಲ ನೀಡಿದ ನಿಮಗೆಲ್ಲ ನಾನು ಋಣಿಯಾಗಿದ್ದೇನೆ. ಗೌರಿ ಸಿನಿಮಾ ಆಗಲು ಕಾರಣರಾದ ಎಲ್ಲರಿಗೂ ಧನ್ಯವಾದ. ತಂದೆ-ತಾಯಿಗೆ ಧನ್ಯವಾದಗಳು’ ಎಂದು ಸಮರ್ಜಿತ್ ಲಂಕೇಶ್ ಹೇಳಿದ್ದಾರೆ.