‘ಕ್ರೀಮ್’ ಸಿನಿಮಾ ಶೂಟಿಂಗ್ನಲ್ಲಿ ಸಂಯುಕ್ತಾ ಹೆಗಡೆ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ಅವರ ಕಾಲಿಗೆ ಗಂಭೀರ ಗಾಯ ಆಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಸಂಯುಕ್ತಾ ಗಾಯದಿಂದ ಚೇತರಿಸಿಕೊಂಡಿದ್ದರು.
ಜುಲೈ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಕ್ರೀಮ್’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಡೂಪ್ ಬಳಸಿ ಫೈಟ್ ಮಾಡೋಕೆ ಸಂಯುಕ್ತಾ ಹೆಗಡೆ ನೋ ಎಂದಿದ್ದರು. ಈ ಫೈಟ್ ವೇಳೆ ಸಂಯುಕ್ತಾ ಗಾಯಗೊಂಡಿದ್ದರು. ಚೇತರಿಕೆ ಕಂಡ ನಂತರದಲ್ಲಿ ಮತ್ತೆ ಅದೇ ಫೈಟ್ನ ಶೂಟ್ ಮಾಡಿದ್ದರು.
‘ಕ್ರೀಮ್’ ಸಿನಿಮಾ ಬಗ್ಗೆ ಸಂಯುಕ್ತಾ ಹೊಸ ಅಪ್ಡೇಟ್ ನೀಡಿದ್ದಾರೆ. ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿರುವುದಾಗಿ ಅವರು ಹೇಳಿದ್ದಾರೆ.
‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸಂಯುಕ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು.
ಸಂಯುಕ್ತಾ ಹೆಗಡೆ ಅವರು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ತಮಗೆ ಹೊಂದುವಂತಹ ಪಾತ್ರಗಳನ್ನು ಮಾತ್ರ ಒಪ್ಪಿ ನಟಿಸುತ್ತಿದ್ದಾರೆ.
Published On - 12:35 pm, Wed, 15 March 23