
ಕನ್ನಡ ಚಿತ್ರರಂಗದಲ್ಲಿ ನಟಿ ಅದ್ವಿತಿ ಶೆಟ್ಟಿ ಅವರು ಗುರುತಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆಯಲ್ಲೂ ಅದ್ವಿತಿ ಅವರು ಸೂಪರ್ ಆ್ಯಕ್ಟೀವ್ ಆಗಿದ್ದಾರೆ.

ಫೋಟೋಶೂಟ್ಗಳ ಬಗ್ಗೆ ಅದ್ವಿತಿ ಶೆಟ್ಟಿ ಅವರಿಗೆ ಕ್ರೇಜ್ ಇದೆ. ಆಗಾಗ ಅವರು ಚಂದದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಫ್ಯಾನ್ಸ್ ಪೇಜ್ಗಳಲ್ಲಿ ಅವರ ಫೋಟೋಗಳು ವೈರಲ್ ಆಗಿ, ಸಖತ್ ಲೈಕ್ಸ್ ಪಡೆಯುತ್ತವೆ.

ಬಾಲಿವುಡ್ ಸುಂದರಿಯರ ರೀತಿ ಅದ್ವಿತಿ ಶೆಟ್ಟಿ ಕೂಡ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಕ್ಯಾಮೆರಾ ಎದುರು ಗ್ಲಾಮರಸ್ ಆಗಿ ಕಣ್ಣುಕುಕ್ಕುವ ಅವರ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ.

ಅದ್ವಿತಿ ಶೆಟ್ಟಿ ಅವರು ಚಿತ್ರರಂಗಕ್ಕೆ ಕಾಲಿಟ್ಟು ಒಂದಷ್ಟು ವರ್ಷಗಳು ಕಳೆದಿವೆ. ‘ಧೀರ ಸಾಮ್ರಾಟ್’, ‘ಐರಾವನ್’, ‘ಶುಗರ್ ಫ್ಯಾಕ್ಟರಿ’, ‘1888’, ‘ಗಿರ್ಗಿಟ್ಲೆ’ ಮುಂತಾದ ಸಿನಿಮಾಗಳಲ್ಲಿ ಅದ್ವಿತಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

ಸಿನಿಮಾ ಮಾತ್ರವಲ್ಲದೇ ರಿಯಾಲಿಟಿ ಶೋಗಳಿಂದಲೂ ಅದ್ವಿತಿ ಶೆಟ್ಟಿ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಸದ್ಯಕ್ಕೆ ಸಿನಿಮಾಗಳೇ ಅವರ ಮೊದಲ ಆದ್ಯತೆ ಆಗಿದೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಅದ್ವಿತಿ ಶೆಟ್ಟಿ ಒಪ್ಪಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಭಾಗವಹಿಸುವಂತೆ ಅದ್ವಿತಿ ಶೆಟ್ಟಿ ಹಾಗೂ ಅವರ ಸಹೋದರಿ ಅಶ್ವಿತಿ ಶೆಟ್ಟಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕಾರಣಾಂತಗಳಿಂದ ಅವರ ಆ ಆಫರ್ ಸ್ವೀಕರಿಸಿರಲಿಲ್ಲ.

ಗ್ಲಾಮರಸ್ ಗೆಟಪ್ ಮಾತ್ರವಲ್ಲದೇ ಸಾಂಪ್ರದಾಯಿಕ ಉಡುಪಿನಲ್ಲೂ ಅದ್ವಿತಿ ಶೆಟ್ಟಿ ಅವರು ಮಿಂಚುತ್ತಾರೆ. ಎಲ್ಲ ಹಬ್ಬ-ಹರಿದಿನಗಳಲ್ಲಿ ಅವರು ಬಣ್ಣ ಬಣ್ಣದ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡುತ್ತಾರೆ.