AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಇಬ್ಬರಿಲ್ಲದ ಮೊದಲ ಟಿ20 ವಿಶ್ವಕಪ್​

T20 World Cup 2026: ಬಹುನಿರೀಕ್ಷಿತ ಟಿ20 ವಿಶ್ವಕಪ್ 2026 ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್​ನಲ್ಲಿ ಇಬ್ಬರು ಹಿರಿಯ ಆಟಗಾರರು ಕಾಣಿಸಿಕೊಳ್ಳುವುದಿಲ್ಲ. ಅಂದರೆ ಕಳೆದ 9 ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದ ಇಬ್ಬರು ಆಟಗಾರರು ಈ ಬಾರಿಯ ಟಿ20 ವಿಶ್ವಕಪ್​ ತಂಡಗಳಲ್ಲಿಲ್ಲ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Feb 05, 2026 | 2:17 PM

Share
T20 World Cup 2026: ಟಿ20 ವಿಶ್ವಕಪ್ ಶುರುವಾಗಿ 18 ವರ್ಷಗಳು ಕಳೆದಿವೆ. ಈ ಹದಿನೆಂಟು ವರ್ಷಗಳಲ್ಲಿ 9 ಟಿ20 ವಿಶ್ವಕಪ್ ಟೂರ್ನಿಗಳು ನಡೆದಿವೆ. ಈ ಒಂಭತ್ತು ಟೂರ್ನಿಗಳಲ್ಲೂ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅಂದರೆ ಈವರೆಗಿನ ಎಲ್ಲಾ ವಿಶ್ವಕಪ್​ಗಳಲ್ಲೂ ಕಣಕ್ಕಿಳಿದಿರುವುದು ಕೇವಲ ಇಬ್ಬರು ಮಾತ್ರ. ಆದರೆ ಆ ಇಬ್ಬರಿಲ್ಲದೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಯೋಜನೆಗೊಳ್ಳುತ್ತಿರುವುದು ವಿಶೇಷ.

1 / 5
ಹೌದು, ಟಿ20 ವಿಶ್ವಕಪ್​ನ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಆಟಗಾರರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು. 2007ರ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಹಿಟ್​ಮ್ಯಾನ್, ಆ ಬಳಿಕ 2009, 2010, 2012, 2014, 2016, 2021, 2022 ಮತ್ತು 2024 ರ ಟಿ20 ವಿಶ್ವಕಪ್​ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು.

2 / 5
ಆದರೆ ಕಳೆದ ಬಾರಿಯ ಟಿ20 ವಿಶ್ವಕಪ್​ನ ಫೈನಲ್​ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಅವರು ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. 

3 / 5
ರೋಹಿತ್ ಶರ್ಮಾ ಅಲ್ಲದೆ,  2007, 2009, 2010, 2012, 2014, 2016, 2021, 2022 ಮತ್ತು 2024 ರ ಟಿ20 ವಿಶ್ವಕಪ್​ಗಳಲ್ಲಿ ಕಣಕ್ಕಿಳಿದ ಮತ್ತೋರ್ವ ಆಟಗಾರನೆಂದರೆ ಬಾಂಗ್ಲಾದೇಶದ ಶಾಹಿಬ್ ಅಲ್ ಹಸನ್. 2025 ರಲ್ಲಿ ಶಾಕಿಬ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಒಂದು ವೇಳೆ ಅವರು ನಿವೃತ್ತಿಯಾಗದೇ ಇದ್ದಿದ್ದರೂ ಈ ಬಾರಿ ಕಣಕ್ಕಿಳಿಯುತ್ತಿರಲಿಲ್ಲ. ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ್ ತಂಡ ಹೊರಗುಳಿದಿದೆ. 

4 / 5
ಅಂದರೆ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಹಾಗೂ ಶಾಕಿಬ್ ಅಲ್ ಹಸನ್ ಇಲ್ಲದೆ ವಿಶ್ವಕಪ್ ನಡೆಯಲಿರುವುದು ವಿಶೇಷ. ಇನ್ನು ಟಿ20 ವಿಶ್ವಕಪ್​ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನಾಡಿದ ದಾಖಲೆ ರೋಹಿತ್ ಶರ್ಮಾ ಹಾಗೂ ಶಾಕಿಬ್ ಅಲ್ ಹಸನ್ ಹೆಸರಿನಲ್ಲಿದೆ. 9 ಸೀಸನ್​ಗಳಲ್ಲಿ 47 ಮ್ಯಾಚ್​ಗಳನ್ನಾಡುವ ಮೂಲಕ ರೋಹಿತ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 43 ಪಂದ್ಯಗಳ ಮೂಲಕ ಶಾಕಿಬ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

5 / 5
Follow Us
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ

ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ

ತಮ್ಮನಾಗಲು ಯೋಗ್ಯತೆಗಳಿರಬೇಕು: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ

ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ

ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!

ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ

ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ

ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ

ನಾನು ಈಗ ವೆಜ್​ಟೇರಿಯನ್, ಅಶೋಕಣ್ಣಂಗೆ ಫ್ರೆಶ್ ಮೀನು ಕಳಿಸ್ತೀನಿ: ಡಿಕೆಶಿ

ಬಂದರು ಪ್ರದೇಶದಲ್ಲಿ ಬೋಟ್ ಹತ್ತಿ ಸಮುದ್ರಕ್ಕಿಳಿದೇ ಬಿಟ್ರು ಸಿಎಂ ಡಿಕೆಶಿ