Updated on: Sep 28, 2022 | 12:07 PM
ನಟಿಯರಿಗೆ ಫೋಟೋಶೂಟ್ಗಳ ಬಗ್ಗೆ ಸಖತ್ ಕ್ರೇಜ್ ಇರುತ್ತದೆ. ವಿಶೇಷ ಥೀಮ್ನಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಅಭಿಮಾನಿಗಳನ್ನು ಅವರು ಖುಷಿಪಡಿಸುತ್ತಾರೆ. ನೆಚ್ಚಿನ ನಟಿಯ ಫೋಟೋಗೆ ಅಭಿಮಾನಿಗಳಿಂದ ಭರಪೂರ ಲೈಕ್ಸ್ ಸಿಗುತ್ತದೆ.
ಸ್ಯಾಂಡಲ್ವುಡ್ ನಟಿಯ ಈ ಫೋಟೋಗಳು ವೈರಲ್ ಆಗಿವೆ. ಇದನ್ನು ಕಂಡು ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕಡಲ ತೀರದಲ್ಲಿ ಬೋಲ್ಡ್ ಆಗಿ ಅವರು ಪೋಸ್ ನೀಡಿದ್ದಾರೆ. ಈ ನಟಿ ಯಾರು ಗೊತ್ತಾಯ್ತಾ?
ಇದು ಬೇರಾರೂ ಅಲ್ಲ.. ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಶಾನ್ವಿ ಶ್ರೀವಾಸ್ತವ. ಸ್ಯಾಂಡಲ್ವುಡ್ನಲ್ಲಿ ಅನೇಕ ಸಿನಿಮಾಗಳ ಮೂಲಕ ಜನಮನ ಗೆದ್ದಿರುವ ಅವರು ಗ್ಲಾಮರಸ್ ಅವತಾರದಲ್ಲಿ ಮಿಂಚಿದ್ದಾರೆ. ಈ ಫೋಟೋ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ನಟನೆಗೂ ಸೈ, ಗ್ಲಾಮರ್ಗೂ ಸೈ ಎಂಬಂತಹ ನಟಿ ಶಾನ್ವಿ ಶ್ರೀವಾಸ್ತವ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 10 ವರ್ಷ ಕಳೆದಿದೆ. ಕನ್ನಡದ ಹಲವು ಸ್ಟಾರ್ ಕಲಾವಿದರ ಜೊತೆ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶಾನ್ವಿ ಶ್ರೀವಾಸ್ತವ ಅವರು ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 13 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಅನೇಕ ಪ್ರಾಜೆಕ್ಟ್ಗಳಲ್ಲಿ ಶಾನ್ವಿ ಬ್ಯುಸಿ ಆಗಿದ್ದಾರೆ.