ಹೀಗಿತ್ತು ಸ್ಯಾಂಡಲ್​​ವುಡ್ ಸೆಲೆಬ್ರಿಟಿಗಳ ಯುಗಾದಿ: ಚಿತ್ರಗಳ ನೋಡಿ

Updated on: Mar 19, 2026 | 6:34 PM

Sandalwood celebrities: ಇಂದು ರಾಜ್ಯದಾದ್ಯಂತ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಕನ್ನಡದ ಹಲವು ಸಿನಿಮಾ ಸೆಲೆಬ್ರಿಟಿಗಳು ಸಹ ಕುಟುಂಬದವರೊಟ್ಟಿಗೆ ಸೇರಿಕೊಂಡು ಯುಗಾದಿ ಹಬ್ಬ ಆಚರಣೆ ಮಾಡಿದ್ದು, ಹಲವು ಸೆಲೆಬ್ರಿಟಿಗಳು ಹಬ್ಬದ ಆಚರಣೆಯ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲ ಚಿತ್ರಗಳು ಇಲ್ಲಿವೆ ನೋಡಿ...

1 / 6
ನಟ ಸುದೀಪ್ ಅವರು ಪತ್ನಿ ಪ್ರಿಯಾ ಅವರೊಟ್ಟಿಗೆ ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುದೀಪ್ ಅವರು ದೇವಾಲಯಕ್ಕೆ ಭೇಟಿ ನೀಡಿದ್ದ ಚಿತ್ರ ಇಲ್ಲಿದೆ.

ನಟ ಸುದೀಪ್ ಅವರು ಪತ್ನಿ ಪ್ರಿಯಾ ಅವರೊಟ್ಟಿಗೆ ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿ ತಿರುಮಲ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುದೀಪ್ ಅವರು ದೇವಾಲಯಕ್ಕೆ ಭೇಟಿ ನೀಡಿದ್ದ ಚಿತ್ರ ಇಲ್ಲಿದೆ.

2 / 6

ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಮಕ್ಕಳ ಜೊತೆಗೆ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಿದ್ದು, ಚಿತ್ರಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

3 / 6

ನಟ ಶ್ರೀಮುರಳಿ ಅವರು ಕುಟುಂಬದೊಟ್ಟಿಗೆ ಯುಗಾದಿ ಆಚರಿಸಿದ್ದಾರೆ. ಮನೆಯಲ್ಲಿ ಯುಗಾದಿ ವಿಶೇಷವಾದ ಹೋಳಿಕೆ ಮಾಡಲು ನೆರವಾಗಿದ್ದಾರೆ. ಹಬ್ಬದ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

4 / 6

ನಟಿ ಖುಷಿ ಸಹ ಸಂಪ್ರದಾಯಬದ್ಧವಾಗಿ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ತಲೆಗೆ ಎಣ್ಣೆ ಹಚ್ಚಿಕೊಳ್ಳುವ ಮೂಲಕ ಅವರ ಯುಗಾದಿ ಆರಂಭಿಸಿ, ತಳಿರು ತೋರಣ ಕಟ್ಟಿ, ಹೋಳಿಗೆ, ಚಿತ್ರಾನ್ನ ಮಾಡಿ, ಬೇವು ಬೆಲ್ಲ ತಿಂದು ಹಬ್ಬ ಮಾಡಿದ್ದಾರೆ.

5 / 6

ನಟಿ ಅಮೂಲ್ಯ ಸಹ ಕುಟುಂಬದ ಜೊತೆಗೆ ಯುಗಾದಿ ಆಚರಿಸಿದ್ದಾರೆ. ವಿಶೇಷವೆಂದರೆ ಯುಗಾದಿ ಹಬ್ಬಕ್ಕೆ ಮಾಡುವ ಮಾವಿನಕಾಯಿ ಚಿತ್ರಾನ್ನದ ರೆಸಿಪಿ ವಿಡಿಯೋವನ್ನು ಸಹ ಅವರು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

6 / 6

ನಟಿ ಸಂಗೀತಾ ಭಟ್ ಅವರು ಕುಟುಂಬದೊಟ್ಟಿಗೆ ಯುಗಾದಿ ಹಬ್ಬ ಆಚರಣೆ ಮಾಡಿದ್ದಾರೆ. ದೇವರ ಪೂಜೆ ಮಾಡಿ, ಬೇವು-ಬೆಲ್ಲ ಸವಿದಿದ್ದಾರೆ. ವಿಡಿಯೋ ಅನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us