
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಾಯಕಿಯರಾದ ಚೈತ್ರಾ ಆಚಾರ್ ಹಾಗೂ ರುಕ್ಮಿಣಿ ವಸಂತ್

ಚೈತ್ರಾ ಆಚಾರ್ ಹಾಗೂ ರುಕ್ಮಿಣಿ ವಸಂತ್ ಅವರುಗಳು ಸಿನಿಮಾದ ಸೆಟ್ನಲ್ಲಿನ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಹಾಗೂ ತಮ್ಮ ಚಿತ್ರಗಳನ್ನು ನಟಿ ಚೈತ್ರಾ ಆಚಾರ್ ಹಂಚಿಕೊಂಡಿದ್ದಾರೆ. ಜೊತೆಗೆ ಗೆಳತಿ ರುಕ್ಮಿಣಿ ಬಗ್ಗೆ ಅಪರೂಪದ ವಿಷಯಗಳನ್ನು ಬರೆದುಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಅದ್ಭುತ ವ್ಯಕ್ತಿಯಾಗಿರುವ ಜೊತೆಗೆ ಸಿನಿಮಾ ಬಗ್ಗೆ ಅತೀವವಾದ ಪ್ರೀತಿ ಇಟ್ಟುಕೊಂಡಿರುವವರು ಎಂದಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪ್ರಿಯಾ ಪಾತ್ರದಲ್ಲಿ ರುಕ್ಮಿಣಿ ನಟಿಸಿರುವ ರೀತಿ ಇನ್ಯಾವುದೇ ನಟಿ ನಟಿಸಲು ಸಾಧ್ಯವಿಲ್ಲ ಎಂದಿದ್ದಾರೆ ಚೈತ್ರಾ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಟಿಯರಾದ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಆತ್ಮೀಯ ಗೆಳತಿಯರಾಗಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಎರಡನೇ ಭಾಗ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದು, ಹಿಟ್ ಎನಿಸಿಕೊಂಡಿದೆ.