ಪೆನ್ನು, ಪೆನ್ಸಿಲ್, ನೋಟ್‍ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣಗಳನ್ನು ಬರೆದಿದ್ದಾರೆ. ಅವುಗಳನ್ನು ಪುರೋಹಿತರೊಬ್ಬರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಒಟ್ಟು ಏಳು ರೀತಿಯ ವಿಶೇಷ ತಾಳೆಗರಿಗಳಲ್ಲಿ ಬರೆದಿರುವ ರಾಮಾಯಣಗಳನ್ನು ಸಂಗ್ರಹಿಸಿದ್ದು, ಅಯೋದ್ಯೆಯ ಶ್ರೀರಾಮನಿಗೆ ಒಪ್ಪಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಎಸ್.ನರಸಿಂಹಮೂರ್ತಿ ಅವರು, ವೇದ ಪಾಂಡಿತ್ಯ ಸೇರಿದಂತೆ ಪುರೋಹಿತ ವೃತ್ತಿಯಲ್ಲಿ ಖ್ಯಾತರಾಗಿದ್ದರು. ಅವರ ನಂತರ ಅವರ ಮಗ ಎಸ್.ಎನ್.ನಾಗೇಂದ್ರ ಸಹಾ ವೇದ ಪಂಡಿತರಾಗಿ ಪುರೋಹಿತ್ಯದ ಜೊತೆಗೆ ಪತ್ರಕರ್ತ ವೃತ್ತಿಯಲ್ಲಿ ತೊಡಗಿದ್ದಾರೆ.
ಎಸ್.ನರಸಿಂಹಮೂರ್ತಿ ಹಾಗೂ ಎಸ್.ಎನ್.ನಾಗೇಂದ್ರ ಅವರ ಪೂರ್ವಜರ ಕಾಲದಿಂದಲೂ ಅವರ ಮನೆಯಲ್ಲಿ ತಾಳೆ ಗರಿಗಳ ಪುಸ್ತಕಗಳ ಸಂಗ್ರಹವಿದೆ. ಅದರಲ್ಲೂ ವಿಶೇಷವಾಗಿ ತಾಳೆ ಗರಿಗಳಲ್ಲಿ ಬರೆದಿರುವ 7 ರೀತಿಯ ವಿಶೇಷ ರಾಮಾಯಣಗಳನ್ನು ಕಾಣಬಹುದಾಗಿದೆ.
ಎಸ್.ಎನ್.ನಾಗೇಂದ್ರರವರ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ತಾಳೆ ಗರಿಗಳ ಲಿಪಿಯಲ್ಲಿ ವಾಲ್ಮೀಕಿ ರಾಮಾಯಣ ಯುದ್ಧಕಾಂಡ ಗ್ರಂಥ, ಆದ್ಯಾತ್ಮ ರಾಮಾಯಣ, ವಿಧರ್ಭರಾಜ ವಿರಚಿತ ಚಂಪುಕಾವ್ಯ ರಾಮಾಯಣ, ಕೌಮುದಿ ರಾಮಾಯಣ, ಶ್ರೀಮದ್ ವಾಲ್ಮೀಕಿ ರಾಮಾಯಣ ಅರಣ್ಯ ಚತುರ್ಥ ಸರ್ಗ, ಸಂಸ್ಕೃತ, ತೆಲುಗು ಮಿಶ್ರಿತ ರಾಮಾಯಣ, 1791 ರಲ್ಲಿ ರಚಿತ ಸಂಪೂರ್ಣ ರಾಮ ಕರುಣಾಮೃತ ರಾಮಾಯಣ ಗ್ರಂಥವನ್ನು ಕಾಣಬಹುದಾಗಿದೆ.
ಗುಡಿಬಂಡೆಯ ಎಸ್.ಎನ್.ನಾಗೇಂದ್ರ ಮನೆಯಲ್ಲಿರುವ ತಾಳೆ ಗರಿ ರಾಮಾಯಣ ಗ್ರಂಥಗಳನ್ನು ಅವರು ಅಯೋಧ್ಯೆಯ ಶ್ರೀರಾಮನ ಪಾದಕ್ಕೆ ಒಪ್ಪಿಸುವ ಅಪೇಕ್ಷೆ ಪಟ್ಟಿದ್ದಾರೆ.
ಪೆನ್ನು, ಪೆನ್ಸಿಲ್, ನೋಟ್‍ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಗ್ರಂಥಗಳನ್ನು ಬರೆದಿದ್ದು, ಅದನ್ನು ಆಧುನಿಕ ಪ್ರಿಂಟಿಂಗ್ ತಂಜ್ರಜ್ಞಾನಕ್ಕೆ ಮಾರ್ಪಡಿಸುವ ಅವಶ್ಯಕತೆ ಇದೆ.
ತಾಳೆ ಗರಿಯಲ್ಲಿ ಬರೆದಿರುವ ರಾಮಾಯಣ
ತಾಳೆ ಗರಿಯಲ್ಲಿ ಬರೆದಿರುವ ರಾಮಾಯಣ