ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಜೋಡಿಯಾಗಿ ನಟಿಸಿದ ‘ದೇವದಾಸ್’ ಸಿನಿಮಾವನ್ನು ಪ್ರೇಕ್ಷಕರು ಎಂದಿಗೂ ಮರೆಯುವುದಿಲ್ಲ. ಸಿನಿಪ್ರಿಯರ ಫೇವರಿಟ್ ಪಟ್ಟಿಯಲ್ಲಿ ಈ ಚಿತ್ರಕ್ಕೆ ಈಗಲೂ ಸ್ಥಾನವಿದೆ.
‘ದೇವದಾಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದು ಸಂಜಯ್ ಲೀಲಾ ಬನ್ಸಾಲಿ. ಈ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಈ ಸಿನಿಮಾದ ಹಾಡುಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ.
2002ರ ಜುಲೈ 12ರಂದು ‘ದೇವದಾಸ್’ ಸಿನಿಮಾ ತೆರೆಕಂಡಿತು. ಬಾಕ್ಸ್ ಆಫೀಸ್ನಲ್ಲಿ ಗೆದ್ದಿದ್ದು ಮಾತ್ರವಲ್ಲದೇ ವಿಮರ್ಶಕರಿಂದ ಭರ್ಜರಿ ಮೆಚ್ಚುಗೆ ಪಡೆದ ಈ ಚಿತ್ರ ರಿಲೀಸ್ ಆಗಿ 20 ವರ್ಷ ಕಳೆದಿದೆ. ಅದಕ್ಕಾಗಿ ಚಿತ್ರತಂಡದವರು ಸಂಭ್ರಮಿಸಿದ್ದಾರೆ.
‘ದೇವದಾಸ್’ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರು ಪಾರೂ ಎಂಬ ಪಾತ್ರ ಮಾಡಿದ್ದರು. ಈಗ ಅವರು ವಿಶೇಷ ಪೋಸ್ಟರ್ ಹಂಚಿಕೊಳ್ಳುವ ಮೂಲಕ 20ನೇ ವರ್ಷದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.
ಬಹಳ ಅದ್ದೂರಿಯಾಗಿ ‘ದೇವದಾಸ್’ ಚಿತ್ರ ಮೂಡಿಬಂದಿತ್ತು. ದೃಶ್ಯ ವೈಭವಕ್ಕೆ ಪ್ರೇಕ್ಷಕರು ಮನ ಸೋತರು. ಎಷ್ಟೇ ವರ್ಷಗಳು ಉರುಳಿದರೂ ಈ ಸಿನಿಮಾದ ಮೆರುಗು ಕಡಿಮೆ ಆಗಿಲ್ಲ. ಟಿವಿಯಲ್ಲಿ ಪ್ರಸಾರವಾದರೆ ಅಭಿಮಾನಿಗಳು ಈಗಲೂ ಅಷ್ಟೇ ಆಸಕ್ತಿಯಿಂದ ನೋಡುತ್ತಾರೆ.
Published On - 1:00 pm, Wed, 13 July 22