ನಟಿ ರಾಗಿಣಿ ಚಂದ್ರನ್ ಅವರು ವೃತ್ತಿಯಲ್ಲಿ ಡ್ಯಾನ್ಸರ್. ಈಗ ಸಿನಿಮಾ ರಂಗದಲ್ಲೂ ಅವರು ತೊಡಗಿಕೊಂಡಿದ್ದಾರೆ. ‘ಶಾನುಭೋಗರ ಮಗಳು’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಭುವನ್ ಫಿಲ್ಮ್ಸ್ ಲಾಂಛನದ ಅಡಿಯಲ್ಲಿ ‘ಶಾನುಭೋಗರ ಮಗಳು’ ಸಿನಿಮಾ ಸಿದ್ಧವಾಗುತ್ತಿದೆ. ಕೋಡ್ಲು ರಾಮಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
‘ಸ್ವತಂತ್ರ ಪೂರ್ವ’ ಕಾದಂಬರಿ ಆಧರಿಸಿ ‘ಶಾನುಭೋಗರ ಮಗಳು’ ಸಿನಿಮಾ ಸಿದ್ಧಗೊಳ್ಳುತ್ತಿದೆ. ಭಾಗ್ಯ ಕೆ ಮೂರ್ತಿ ಅವರು ಈ ಕಾದಂಬರಿ ಬರೆದಿದ್ದಾರೆ.
ಸ್ವಾತಂತ್ರ್ಯ ಪೂರ್ವದ ಕಥೆ ಆಗಿರುವುದರಿಂದ ಸಹಜವಾಗಿಯೇ ಸಿನಿಮಾ ಸ್ವಾಂತತ್ರ್ಯ ಹೋರಾಟದ ಬಗ್ಗೆ ಇದೆ. ಬ್ರಿಟಿಷರು, ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರ ಸನ್ನಿವೇಶಗಳು ಈ ಚಿತ್ರದಲ್ಲಿ ಬರುತ್ತವೆ.
‘ಶಾನುಭೋಗರ ಮಗಳ’ ಪಾತ್ರದಲ್ಲಿ ರಾಗಿಣಿ ಚಂದ್ರನ್ ನಟಿಸುತ್ತಿದ್ದಾರೆ. ನಾಲ್ಕಾರು ಬ್ರಿಟಿಷರನ್ನು ಗುಂಡಿಟ್ಟಿ ಸಾಯಿಸುವ ದೃಶ್ಯವನ್ನು ಇತ್ತೀಚಿಗೆ ಶ್ರೀರಂಗ ಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ಶೂಟ್ ಮಾಡಲಾಗಿದೆ.
ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ನಟಿಸುತ್ತಿದ್ದಾರೆ. ರಮೇಶ್‍ಭಟ್, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ, ಕುಮಾರಿ ಅನನ್ಯ, ಭಾಗ್ಯಶ್ರೀ, ನಿರಂಜನ ಶೆಟ್ಟಿ, ಟಿ.ಎನ್. ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಡಾ. ಶಮಿತಾ ಮಲ್ನಾಡ್ ಸಂಗೀತ ಸಂಯೋಜನೆ, ಬಿ.ಎ. ಮಧು ಚಿತ್ರಕತೆ-ಸಂಭಾಷಣೆ, ಕೆಂಪರಾಜ್ ಸಂಕಲನ, ಛಾಯಾಗ್ರಹಣ ಜೈ ಆನಂದ್, ಕರುಣ್ ಮಯೂರ್ ನಿರ್ಮಾಣ ನಿರ್ವಹಣೆ, ರಘು ಕುಮಾರ್, ನಾಗರಾಜ ರಾವ್ ಹಾಸನ್ ಹಾಗೂ ಸುನೀಲ್ ಸಹ ನಿರ್ದೇಶನ ಮಾಡಿದ್ದಾರೆ.
‘ಶಾನುಭೋಗರ ಮಗಳು’ ಚಿತ್ರದಲ್ಲಿ ರಾಗಿಣಿ