Updated on: Jun 29, 2023 | 11:11 PM
ಹಾಗಲಕಾಯಿ ಎಷ್ಟು ಪ್ರಯೋಜನಕಾರಿಯೋ, ಅಷ್ಟೇ ಅದರ ರಸ ಕೂಡ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾ ಗಿದೆ. ಹಾಗಲಕಾಯಿ ಕಹಿಯಾಗಿರುತ್ತದೆ, ಆದರೆ ಇದರ ರಸ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
ಹಾಗಲಕಾಯಿ ರಸ ಚರ್ಮದ ಫಂಗಸ್ ಸೋಂಕನ್ನು ತಡೆಗಟ್ಟುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ.
ಸಂಧಿವಾತದ ನೋವಿನ ಮುಖ್ಯ ಕಾರಣವೆಂದರೆ ರಕ್ತದಲ್ಲಿನ ಕಲ್ಮಶಗಳು. ಹಾಗಲಕಾಯಿ ರಸ ಸೇವನೆಯಿಂದ ರಕ್ತದಲ್ಲಿನ ಕಲ್ಮಶಗಳನ್ನು ತೆಗೆದುಹಾಕುತ್ತದೆ.
ಹಾಗಲಕಾಯಿ ರಸ ಕುಡಿಯುವುದರಿಂದ ಅತಿಯಾದ ಮದ್ಯ ಸೇವನೆಯ ಅಮಲು ಹೋಗಲಾಡಿಸುತ್ತದೆ. ಜೊತೆಗೆ ಲಿವರ್ನ್ನು ಶುದ್ಧಗೊಳಿಸುತ್ತದೆ.
ಪ್ರತಿದಿನ ಎರಡು ಚಮಚ ಹಸಿ ಹಾಗಲಕಾಯಿ ರಸವನ್ನು ಸಮಪ್ರಮಾಣದ ಬಿಳಿ ಈರುಳ್ಳಿ ರಸದೊಂದಿಗೆ ಸೇವಿಸಿದರೆ ಕಾಲರಾ ಗುಣವಾಗುತ್ತದೆ. ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ರಸವನ್ನು ಅರ್ಧ ಕಪ್ ತೆಗೆದುಕೊಂಡರೆ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ.