
ಅಂಕಿತಾ ಅಮರ್ ಮತ್ತು ಶೈನ್ ಶೆಟ್ಟಿ ಅವರು ‘ಜಸ್ಟ್ ಮ್ಯಾರೀಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ನೂತನ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆ ಆಗಿದೆ.

ನಾಗೇಂದ್ರ ಪ್ರಸಾದ್ ಅವರ ಹೃದಯಸ್ಪರ್ಶಿ ಸಾಹಿತ್ಯ, ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತದಲ್ಲಿ ‘ಮಾಂಗಲ್ಯಂ ತಂತುನಾನೇನ’ ಹಾಡು ಸಿದ್ಧವಾಗಿದೆ. ಮದುವೆಯ ಸಂಭ್ರಮ ಮತ್ತು ಸಡಗರ ಈ ಹಾಡಿನಲ್ಲಿ ಇದೆ.

ಈಗಾಗಲೇ ಹಲವಾರು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಜಿತ್ ಹೆಗ್ಡೆ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ. ಅವರ ಸೂಪರ್ ಹಿಟ್ ಗೀತೆಗಳ ಸಾಲಿಗೆ ‘ಮಾಂಗಲ್ಯಂ ತಂತುನಾನೇನ’ ಹಾಡು ಕೂಡ ಸೇರ್ಪಡೆ ಆಗಿದೆ.

‘ಈ ಹಾಡು ರೀಲ್ಸ್‌ಗೆ ಮಾತ್ರವಲ್ಲ, ರಿಯಲ್ ಲೈಫ್ಗೆ’ ಎಂದು ಚಿತ್ರತಂಡ ಹೇಳಿದೆ. ಅಂಕಿತಾ ಅಮರ್ ಹಾಗೂ ಶೈನ್ ಶೆಟ್ಟಿ ಅವರ ನಡುವಿನ ಕೆಮಿಸ್ಟ್ರಿ ಈ ಹಾಡಿನಲ್ಲಿ ಕಾಣಿಸಿದೆ. ಸಿನಿಪ್ರಿಯರಿಗೆ ಈ ಹಾಡು ಇಷ್ಟ ಆಗಿದೆ.

ಎಲ್ಲ ಮದುವೆ ಮನೆಯಲ್ಲಿ ಈ ಹಾಡು ಮೊಳಗಲಿದೆ. ಕಲರ್ಫುಲ್ ಆಗಿ ಈ ಹಾಡು ಚಿತ್ರೀಕರಣಗೊಂಡಿದೆ. ಈ ಮೊದಲು ಟೀಸರ್ ಮೂಲಕ ಗಮನ ಸೆಳೆದಿದ್ದ ‘ಜಸ್ಟ್ ಮ್ಯಾರೀಡ್’ ಸಿನಿಮಾ ಈಗ ಹಾಡಿನಿಂದ ಸದ್ದು ಮಾಡುತ್ತಿದೆ.