
ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಮಾರ್ಚ್ 17ರಂದು ತೆರೆಗೆ ಬರಲಿದೆ.

ಪುನೀತ್ ನಿರ್ವಹಿಸಿದ್ದ ಪಾತ್ರಕ್ಕೆ ಸಹೋದರ ಶಿವರಾಜ್ಕುಮಾರ್ ಧ್ವನಿ ನೀಡಿದ್ದಾರೆ.

ಎರಡೂವರೆ ದಿನಗಳ ಕಾಲ ಡಬ್ಬಿಂಗ್ ನಡೆಸಿದ ಶಿವಣ್ಣ, ನಿನ್ನೆ ಅಂದರೆ ಮಂಗಳವಾರ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ.

ಶಿವಣ್ಣ ಸ್ಟುಡಿಯೋದಲ್ಲಿ ಧ್ವನಿ ನೀಡುತ್ತಿರುವ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

ಡಬ್ಬಿಂಗ್ ಕುರಿತು ಮಾತನಾಡಿದ ಶಿವಣ್ಣ, ಮತ್ತೊಬ್ಬ ಕಲಾವಿದರಿಗೆ ಕಂಠದಾನ ಮಾಡುವುದು ಬಹಳ ಸವಾಲಿನ ಕೆಲಸ ಎಂದು ನುಡಿದಿದ್ದಾರೆ.

ಪುನೀತ್ ಪಾತ್ರಕ್ಕೆ ಧ್ವನಿ ನೀಡುವುದು ಕಷ್ಟ, ಆದರೂ ಪ್ರಯತ್ನ ನಡೆಸಿದ್ದೇನೆ. ಎಲ್ಲರಿಗೂ ಇಷ್ಟವಾಗಬಹುದು ಎಂದು ಶಿವಣ್ಣ ಹೇಳಿದ್ದಾರೆ.