ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್ಸಿಬಿ-ಸಿಎಸ್ಕೆ ಪಂದ್ಯ ವೀಕ್ಷಿಸಲು ಶಿವರಾಜ್ ಕುಮಾರ್ ಆಗಮಿಸಿದ್ದು, ಗೆಲ್ಲೋದು ಆರ್ಸಿಬಿ ಹುಡುಗರೇ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
Follow us
ಆರ್ಸಿಬಿ ತಂಡದ ಅಪ್ಪಟ ಅಭಿಮಾನಿ ಹಾಗೂ ಬೆಂಬಲಿಗರಾಗಿರುವ ಶಿವಣ್ಣ ಆರ್ಸಿಬಿ ಜರ್ಸಿ ತೊಟ್ಟು ಚಿನ್ನಸ್ವಾಮಿಗೆ ಹೋಗಿದ್ದಾರೆ.
ಶಿವರಾಜ್ ಕುಮಾರ್ ಜೊತೆಗೆ ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಇನ್ನೂ ಕೆಲವು ಚಿತ್ರರಂಗದ ಗೆಳೆಯರಿದ್ದಾರೆ.
ಟ್ವಿಟ್ಟರ್ನಲ್ಲಿ ಸಹ ತಮ್ಮ ಚಿತ್ರಗಳನ್ನು ಅಪ್ಲೋಡ್ ಮಾಡಿರುವ ಶಿವಣ್ಣ, ‘ಬರ್ಕಳಯ್ಯ, ಮುಂದುಗಡೆ ಪೇಜ್ನಲ್ಲಿ ಬರ್ಕೋ ಗೆಲ್ಲೋದು ಆರ್ಸಿಬಿ ಹುಡುಗರೇಯ’ ಎಂದಿದ್ದಾರೆ.
ಶಿವಣ್ಣನನ್ನು ಚಿನ್ನಸ್ವಾಮಿಯ ದೊಡ್ಡ ಪರದೆಯ ಮೇಲೆ ತೋರಿಸುತ್ತಿದ್ದಂತೆ ಪ್ರೇಕ್ಷಕರು ಕೂಗಾಡಿ ಕಿರುಚಾಡಿ ಅಬ್ಬರ ಎಬ್ಬಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಇತರೆ ಕೆಲವು ಸಂಪುಟ ಸಚಿವರು, ಕಾಂಗ್ರೆಸ್ ಮುಖಂಡರು ಸಹ ಮ್ಯಾಚ್ ನೋಡಲು ಬಂದಿದ್ದಾರೆ.
ಶಿವಣ್ಣ ಮಾತ್ರವೇ ಅಲ್ಲದೆ ರಿಷಬ್ ಶೆಟ್ಟಿಹಾಗೂ ಇನ್ನಿತರರು ಪಂದ್ಯ ನೋಡಲು ಬಂದಿದ್ದಾರೆ
ಇಂದು ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಅತ್ಯಂತ ಮಹತ್ವದ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯುತ್ತಿದ್ದು, ಶಿವಣ್ಣ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ.