
ಶಿವರಾಜ್ಕುಮಾರ್ ಮತ್ತೆ ಚಿತ್ರರಂಗದ ಕೆಲಸಗಳಿಗೆ ಮರಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡಿರುವ ಅವರು, ಅದರ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.
ಟಿವಿ9 ಕನ್ನಡದ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ಹಲವು ಗಣ್ಯರ ಸಮ್ಮುಖದಲ್ಲಿ ಶಿವರಾಜ್ಕುಮಾರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಪಡೆದ ಅವರು ಸಂತಸದ ಮಾತುಗಳನ್ನು ಆಡಿದರು.
ಪುನೀತ್ ರಾಜ್ಕುಮಾರ್ ನಿಧನದಿಂದ ಶಿವರಾಜ್ಕುಮಾರ್ ಸಾಕಷ್ಟು ಬೇಸರಗೊಂಡಿದ್ದರು.