
ಶಿವರಾಜ್ಕುಮಾರ್ ಅವರು ತಮಗಿರೋ ಕೆಲವು ಸಿನಿಮಾ ಕಮಿಟ್ಮೆಂಟ್ಗಳನ್ನು ಪೂರ್ಣಗೊಳಿಸಿದ್ದಾರೆ. ಅದಕ್ಕೆ ಕಾರಣ ಅನಾರೋಗ್ಯ. ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಬೇಕಿದೆ. ಹೀಗಾಗಿ, ಕೆಲವು ಸಿನಿಮಾ ಕೆಲಸಗಳನ್ನು ಮುಂದಕ್ಕೆ ಹಾಕಿದ್ದಾರೆ.

ಶಿವರಾಜ್ಕುಮಾರ್ ಅವರು ಈಗ ತಿರುಪತಿಗೆ ತೆರಳಿದ್ದಾರೆ. ಇಡೀ ಕುಟುಂಬದ ಜೊತೆ ಅಲ್ಲಿಗೆ ತೆರಳಿರೋ ಅವರು ಮುಡಿ ಕೊಟ್ಟಿದ್ದಾರೆ. ಗೀತಾ ಶಿವರಾಜ್ಕುಮಾರ್ ಕೂಡ ಕೂದಲು ತೆಗೆಸಿದ್ದಾರೆ. ಆ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈಲ್ ಆಗಿವೆ.

ಚಿಕಿತ್ಸೆಗಾಗಿ ಶಿವರಾಜ್ಕುಮಾರ್ ಅಮೆರಿಕಕ್ಕೆ ತೆರಳಲಿದ್ದಾರೆ. ಅವರಿಗೆ ಏನಾಗಿದೆ ಎಂಬ ವಿಚಾರ ಇನ್ನೂ ರಿವೀಲ್ ಮಾಡಿಲ್ಲ. ಅವರು ಚಿಕಿತ್ಸೆ ಪಡೆಯುವುದಕ್ಕೂ ಮೊದಲು ತಿಮ್ಮಪ್ಪನ ಸನ್ನಿಧಾನದಲ್ಲಿದ್ದು ಆಶೀರ್ವಾದ ಪಡೆದಿದ್ದಾರೆ.

ಶಿವರಾಜ್ಕುಮಾರ್ ಅವರು ಕೆಲವು ತಿಂಗಳು ನಟನೆಯಿಂದ ದೂರ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಸಂಪೂರ್ಣ ಚೇತರಿಕೆ ಕಂಡ ಬಳಿಕವೇ ನಟನೆಯತ್ತ ಗಮನ ಹರಿಸಲಿದ್ದಾರೆ. ಈಗ ಶಿವಣ್ಣನ ಲುಕ್ ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ.

ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈಗ ಅವರು ನಟಿಸಿರೋ ‘45’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಈ ಸಿನಿಮಾ ಕೂಡ ಶೀಘ್ರವೇ ರಿಲೀಸ್ ಆಗುವ ಸಾಧ್ಯತೆ ಇದೆ.
Published On - 9:58 am, Sat, 7 December 24