Updated on: Sep 01, 2022 | 1:49 PM
ದೇಶಾದ್ಯಂತ ಗಣೇಶ ಚತುರ್ಥಿ ಆಚರಿಸಲಾಗಿದೆ. ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿ ಆಗಿದ್ದಾರೆ.
ನಟಿ ಶ್ರದ್ಧಾ ಕಪೂರ್ ಅವರು ಖುಷಿಖುಷಿಯಿಂದ ಹಬ್ಬ ಮಾಡಿದ್ದಾರೆ. ಗಣೇಶ ಚತುರ್ಥಿ ಆಚರಿಸಿದ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಎಲ್ಲರಿಗೂ ವಿಶ್ ಮಾಡಿದ್ದಾರೆ.
ವಿಶೇಷ ಏನೆಂದರೆ, ಶ್ರದ್ಧಾ ಕಪೂರ್ ಅವರ ಮನೆಯಲ್ಲಿ 10 ದಿನಗಳ ಕಾಲ ಗಣೇಶನ ಹಬ್ಬ ಮಾಡಲಾಗುತ್ತದೆ. ‘ವರ್ಷದ ಈ 10 ದಿನಗಳು ನನ್ನ ಫೇವರಿಟ್’ ಎಂದು ಅವರು ಹೇಳಿದ್ದಾರೆ.
ಗಣೇಶ ಚತುರ್ಥಿ ಸಲುವಾಗಿ ಶ್ರದ್ಧಾ ಕಪೂರ್ ಅವರು ಕೆಂಪು ಬಣ್ಣದ ಸೀರೆ ಧರಿಸಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮೋದಕ ಸವಿದು ಖುಷಿಪಟ್ಟಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.
ಕಳೆದ ವರ್ಷ ಕೂಡ ಶ್ರದ್ಧಾ ಕಪೂರ್ ಅವರು ಸಡಗರದಿಂದ ಈ ಹಬ್ಬವನ್ನು ಆಚರಿಸಿದ್ದರು. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಹಲವು ಪ್ರಾಜೆಕ್ಟ್ಗಳಲ್ಲಿ ಶ್ರದ್ಧಾ ಬ್ಯುಸಿ ಆಗಿದ್ದಾರೆ.