Siddeshwar swamiji: ಭವ್ಯ ವ್ಯಕ್ತಿತ್ವ ದಿವ್ಯ ಸಂದೇಶ ನೀಡಿದ ಸಿದ್ದೇಶ್ವರ ಶ್ರೀಗಳು ಸರಳ ಜೀವನದ ಮಾರ್ಗ; ಫೋಟೋಗಳಲ್ಲಿ

ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಜನವರಿ 3 ಸಾಂಯಕಾಲ 6 ಗಂಟೆಗೆ ಲಿಂಗಕ್ಯರಾದರು.

TV9 Web
| Updated By: ವಿವೇಕ ಬಿರಾದಾರ

Updated on:Jan 03, 2023 | 1:27 AM

Siddeshwar swamiji biography in photos

ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಜನವರಿ 3 ಸಾಂಯಕಾಲ 6 ಗಂಟೆಗೆ ಶಿವನಲ್ಲಿ ಲೀನವಾದರು.

1 / 16
Siddeshwar swamiji biography in photos

ಸಿದ್ದೇಶ್ವರ ಸ್ವಮೀಜಿ ಮನೆ: ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು 1941ರ ಅ. 24ರಂದು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು.

2 / 16
Siddeshwar swamiji biography in photos

ತಂದೆ ಹೆಸರು ಓಗೆಪ್ಪಗೌಡ ಸಿದ್ದಗೊಂಡ ಪಾಟೀಲ್, ತಾಯಿ ಹೆಸರು ಸಂಗಮ್ಮ ಓಗೆಪ್ಪಗೌಡ ಪಾಟೀಲ್. ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ 6 ಮಕ್ಕಳು.

3 / 16
Siddeshwar swamiji biography in photos

ಸಿದ್ದೇಶ್ವರ ಶ್ರೀಗಳು ಬಿಜ್ಜರಗಿಯಲ್ಲೇ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ, 8ರಿಂದ 10ನೇ ತರಗತಿಯನ್ನು ಚಡಚಣದಲ್ಲಿ ಪೂರ್ಣಗೊಳಿಸಿದರು.

4 / 16
Siddeshwar swamiji biography in photos

ವಿಜಯಪುರದ ವಿಜಯ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು. ಇವರು ಪಿಯು ಶಿಕ್ಷಣ ಪಡೆಯುವಾಗ ತಮಶೆಟ್ಟಿ ಕುಟುಂಬದ ಮನೆಯಲ್ಲಿ ವಾಸವಿದ್ದರು.

5 / 16
Siddeshwar swamiji biography in photos

ತಮಶೆಟ್ಟಿ ಕುಟುಂಬದ ಮನೆಯಲ್ಲಿ ವಾಸವಿದ್ದಾಗ ಶ್ರೀಗಳು ಬಳಸುತ್ತಿದ್ದ ಮಣೆ

6 / 16
Siddeshwar swamiji biography in photos

ಬಾಲ್ಯದಲ್ಲೇ ಆಧ್ಯಾತ್ಮದತ್ತ ಒಲವು ತೋರಿದ್ದ ಶ್ರೀಗಳು ಮಿತಭಾಷಿ, ಮುಗ್ಧತೆ, ಏಕಾಂಗಿತನ ಬಯಸುತ್ತಿದ್ದರಯ.

7 / 16
Siddeshwar swamiji biography in photos

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ನಂತರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

8 / 16
Siddeshwar swamiji biography in photos

ನೈತಿಕ ಶಿಕ್ಷಣ, ನೀತಿಕಥೆ, ಆಧ್ಯಾತ್ಮದ ಬಗ್ಗೆ ಓದುತ್ತಿದ್ದರು. ಶಾಲೆಯಲ್ಲಿದ್ದಾಗಲೇ ದಿವ್ಯದೃಷ್ಟಿಯನ್ನ ಪಡೆದಿದ್ದರು.

9 / 16
Siddeshwar swamiji biography in photos

ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿಯವರ, ಗುರುವಿನ ಆಶಯದಂತೆ ಭವ ಬಂಧನವನ್ನು ತೊರೆದು ಆಧ್ಯಾತ್ಮದತ್ತ ಒಲವು ಬೆಳಸಿಕೊಂಡರು.

10 / 16
Siddeshwar swamiji biography in photos

ಶ್ರೀಗಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಇತ್ತು. ವಿಶ್ವದ ಹಲವು ರಾಷ್ಟ್ರಗಳ ಧರ್ಮಗ್ರಂಥ ಅಧ್ಯಯನ ಮಾಡಿದ್ದರು. ಆಧ್ಯಾತ್ಮ, ಧಾರ್ಮಿಕ, ತತ್ವಶಾಸ್ತ್ರದ ಸಾಹಿತ್ಯ ಓದಿಕೊಂಡಿದ್ದರು. ಎಲ್ಲ ಪರಂಪರೆಗಳನ್ನು ಬಲ್ಲವರಾಗಿದ್ದರು.

11 / 16
Siddeshwar swamiji biography in photos

ಇವರ ಜ್ಞಾನದ ಸಿಂಚನಕ್ಕೆ, ಆಧ್ಯಾತ್ಮಿಕ ಪ್ರವಚನಕ್ಕೆ ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಿದ್ದಾರೆ. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು.

12 / 16
Siddeshwar swamiji biography in photos

ಎಲ್ಲೂ ಹಾರ ತುರಾಯಿ ಸ್ವೀಕರಿಸ್ತಿರಲಿಲ್ಲ. ಜೀವನ್ಮುಖಿ ಸಂದೇಶಗಳ ಮೂಲಕ ಜೀವಚೈತನ್ಯ, ಯಾರನ್ನೂ ವಿರೋಧಿಸುವ ಮನಸ್ಥಿತಿ ಹೊಂದಿರಲಿಲ್ಲ.

13 / 16
Siddeshwar swamiji biography in photos

ಸನ್ಮಾನ, ಗೌರವ, ಬಿರುದುಗಳ ವ್ಯಾಮೋಹವಿರಲಿಲ್ಲ. ಪದ್ಮಶ್ರೀ, ವಿವಿಗಳ ಗೌರವ ಡಾಕ್ಟರೇಟ್ ಪಡೆದಿರಲಿಲ್ಲ. ಪ್ರಶಸ್ತಿಗಳನ್ನ ಸೌಜನ್ಯದಿಂದ ತಿರಸ್ಕರಿಸಿದ್ದರು. ತಮಗಾಗಿ ಬಿಡಿಗಾಸನ್ನು ಸಂಪಾದಿಸಿಕೊಳ್ಳಲಿಲ್ಲ.

14 / 16
Siddeshwar swamiji biography in photos

ಶ್ರೀಗಳು ಧರಿಸ್ತಿದ್ದ ಅಂಗಿಗೆ ಜೇಬುಗಳೇ ಇರಲಿಲ್ಲ. 2 ಜತೆ ಬಿಳಿ ಪಂಚೆ, ಅಂಗಿ ಮಾತ್ರ ಹೊಂದಿದ್ದರು. ತಮ್ಮ ಬಟ್ಟೆ ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು.

15 / 16
Siddeshwar swamiji biography in photos

ಸಿದ್ದೇಶ್ವರ ಶ್ರೀಗಳು, ಗುರುಗಳಾದ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಭಕ್ತವೃಂದ

16 / 16

Published On - 1:25 am, Tue, 3 January 23

Follow us
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಪೊಲೀಸರು ಬಂಧಿಸಿರುವ ದುಷ್ಟವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲ: ಕರ್ಣ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಕಾಶ್ಮೀರದಲ್ಲಿಂದು ಝಡ್​-ಮೋಡ್​ ಸುರಂಗ ಮಾರ್ಗ​ ಉದ್ಘಾಟಿಸಲಿದ್ದಾರೆ ಮೋದಿ
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಚನ್ನಪಟ್ಟಣದದಲ್ಲಿ ನಿಖಿಲ್ ಸೋಲಿನಿಂದ ವಿಚಲಿತರಾಗಿರುವ ಜೆಡಿಎಸ್ ನಾಯಕರು
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ