ಪ್ರೆಸಿಡೆನ್ಸಿ ವಿವಿ ‘ಕನ್ನಡ ಹಬ್ಬ’ಕ್ಕೆ ರಂಗು ತುಂಬಿದ ಸಂಜಿತ್ ಹೆಗ್ಡೆ: ಇಲ್ಲಿವೆ ಚಿತ್ರಗಳು

Updated on: Nov 22, 2025 | 8:50 PM

Sanjith Hegde: ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವವನ್ನು ಇಂದು (ನವೆಂಬರ್ 22) ರಂದು ಅದ್ಧೂರಿಯಾಗಿ ಆಚರಿಸಲಾಯಿತು. ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಅವರು ಕನ್ನಡ ಹಬ್ಬವನ್ನು ಉದ್ಘಾಟಿಸಿದ ಜೊತೆಗೆ ತಮ್ಮ ಸುಮಧುರ ಗಾಯನದಿಂದ ವಿದ್ಯಾರ್ಥಿಗಳ ರಂಜಿಸಿದರು. ಇಲ್ಲಿವೆ ನೋಡಿ ಕಾರ್ಯಕ್ರಮದ ಚಿತ್ರಗಳು.

1 / 5
ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವವನ್ನು ಇಂದು (ನವೆಂಬರ್ 22) ಅದ್ಧೂರಿಯಾಗಿ ಆಚರಿಸಲಾಯಿತು. ವಿದ್ಯಾರ್ಥಿ ವ್ಯವಹಾರಗಳ ವಿಭಾಗ-ಸುಪ್ರತಿಭ ಕಾರಂಜಿ ಕನ್ನಡ ಸಂಘ ಮತ್ತು ಪ್ರೆಸಿಡೆನ್ಸಿ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಜಂಟಿಯಾಗಿ 'ಕನ್ನಡ ಹಬ್ಬ 2025' ಅನ್ನು ಆಯೋಜಿಸಿದ್ದರು.

2 / 5
ಕಾರ್ಯಕ್ರಮವನ್ನು ಅತ್ಯಂತ ವಿಶೇಷವಾಗಿಸಿದ್ದು ಗಾಯಕ ಸಂಜಿತ್ ಹೆಗ್ಡೆ. ಕನ್ನಡ ಹಬ್ಬವನ್ನು ಉದ್ಘಾಟಿಸಿದ ಅವರು, ತಮ್ಮ ಸುಮಧುರ ಹಾಡುಗಳಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಅವರ ಗಾಯನ ಮಾಧುರ್ಯಕ್ಕೆ ವಿದ್ಯಾರ್ಥಿಗಳು ತಲೆದೂಗಿದರು.

3 / 5
ಕರ್ನಾಟಕದ ಜಾನಪದ ಸಂಸ್ಕೃತಿ ಮತ್ತು ನೃತ್ಯ ಪ್ರಕಾರಗಳನ್ನು ಆಚರಿಸುವ ಬೃಹತ್ ಮೆರವಣಿಗೆ ಸಹ ಕನ್ನಡ ಹಬ್ಬದಲ್ಲಿ ನಡೆಯಿತು. ನಂತರ ಪ್ರೇಕ್ಷಕರನ್ನು ರಂಜಿಸಲು ಸಭಾಂಗಣದಲ್ಲಿ ವಿವಿಧ ಏಕವ್ಯಕ್ತಿ ಮತ್ತು ಗುಂಪು ಕಲಾಪ್ರದರ್ಶನಗಳು ನಡೆದವು.

4 / 5
ಜನಪ್ರಿಯ ಕನ್ನಡ ಸ್ಟ್ಯಾಂಡ್-ಅಪ್ ಕಲಾವಿದ ನಿತಿನ್ ಕಾಮತ್ ಕೂಡ ‘ಕನ್ನಡ ಹಬ್ಬ’ ಆಚರಣೆಯಲ್ಲಿ ಭಾಗವಹಿಸಿದರು ಮತ್ತು ಅವರ ಸ್ಟ್ಯಾಂಡ್-ಅಪ್ ಹಾಸ್ಯ ಪ್ರದರ್ಶನವು ವಿದ್ಯಾರ್ಥಿಗಳನ್ನು ರಂಜಿಸಿತು.
ಪ್ರೊ.ವಿದ್ಯಾ ಶಂಕರ್ ಶೆಟ್ಟಿ-ಪ್ರೊ ವೈಸ್ ಚಾನ್ಸೆಲರ್ ವಿದ್ಯಾರ್ಥಿಗಳನ್ನು ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಅಭಿನಂದಿಸಿದರು.

ಜನಪ್ರಿಯ ಕನ್ನಡ ಸ್ಟ್ಯಾಂಡ್-ಅಪ್ ಕಲಾವಿದ ನಿತಿನ್ ಕಾಮತ್ ಕೂಡ ‘ಕನ್ನಡ ಹಬ್ಬ’ ಆಚರಣೆಯಲ್ಲಿ ಭಾಗವಹಿಸಿದರು ಮತ್ತು ಅವರ ಸ್ಟ್ಯಾಂಡ್-ಅಪ್ ಹಾಸ್ಯ ಪ್ರದರ್ಶನವು ವಿದ್ಯಾರ್ಥಿಗಳನ್ನು ರಂಜಿಸಿತು. ಪ್ರೊ.ವಿದ್ಯಾ ಶಂಕರ್ ಶೆಟ್ಟಿ-ಪ್ರೊ ವೈಸ್ ಚಾನ್ಸೆಲರ್ ವಿದ್ಯಾರ್ಥಿಗಳನ್ನು ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಅಭಿನಂದಿಸಿದರು.

5 / 5
ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಡೀನ್ ಡಾ.ಅನು ಸುಖದೇವ್ ಮತ್ತು ಪ್ರೆಸಿಡೆನ್ಸಿ ಸ್ಕೂಲ್ ಆಫ್ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಮುಖ್ಯಸ್ಥ ಡಾ.ಪ್ರೀತಾ ಸನ್ಯಾಲ್ ಅವರು 'ಕನ್ನಡ ಹಬ್ಬ 2025' ಒಂದು ತಿಂಗಳ ಕಾಲ ನಡೆಯುವ ಕರ್ನಾಟಕ ರಾಜ್ಯೋತ್ಸವ ಆಚರಣೆಗಳಿಗೆ ಸೂಕ್ತವಾದ ಅಂತ್ಯವಾಗಿದೆ ಎಂದು ತಿಳಿಸಿದರು.

Published On - 8:48 pm, Sat, 22 November 25