
ಮಹೇಶ್ ಬಾಬು ಅವರು ಸದ್ಯ ‘ಎಸ್ಎಸ್ಎಂಬಿ 29’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಅವರು ರೋಮ್ಗೆ ಪ್ರವಾಸ ತೆರಳಿದ್ದಾರೆ. ಇವರ ಜೊತೆಗೆ ಕುಟುಂಬದವರು ಕೂಡ ಇದ್ದರು. ಈಗ ಮಹೇಶ್ ಬಾಬು ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದು, ಮಕ್ಕಳು ಸುತ್ತಾಟ ಮುಂದುವರಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಅವರ ಕಾರ್ಯಕ್ರಮಕ್ಕೆ ಸಿತಾರಾ, ನಮ್ರತಾ ಹಾಗೂ ಗೌತಮ್ ತೆರಳಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ನಮ್ರತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಪ್ರಿಯಾಂಕಾಗೆ ವಿಶೇಷ ಧನ್ಯವಾದ ಹೇಳಿದ್ದಾರೆ.

ಈ ವಿಶೇಷ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದು ಪ್ರಿಯಾಂಕಾ ಚೋಪ್ರಾ ಅವರು. ಹೀಗಾಗಿ, ನಮ್ರತಾ ಶಿರೋಡ್ಕರ್ ಅವರು ಪ್ರಿಯಾಂಕಾಗೆ ಧನ್ಯವಾದ ಹೇಳಿದ್ದಾರೆ. ನಿಕ್ ಜೋನಸ್ ಅವರು ಅಮೆರಿಕದ ಖ್ಯಾತ ಪಾಪ್ ಸಿಂಗರ್ ಆಗಿದ್ದಾರೆ ಅನ್ನೋದು ವಿಶೇಷ.

ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಮಹೇಶ್ ಕುಟುಂಬದ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಪತಿಯ ಕಾನ್ಸರ್ಟ್ಗೆ ಪ್ರಿಯಾಂಕಾ ಅವರು ಅವಕಾಶ ಕೊಡಿಸಿ ಕೊಟ್ಟಿದ್ದಾರೆ. ಈ ಫೋಟೋಗೆ ಲೈಕ್ಸ್ ಸಿಕ್ಕಿದೆ.

ಮಹೇಶ್ ಬಾಬು ಮಗಳು ಸಿತಾರಾಗೆ ಈಗಿನ್ನು 12 ವರ್ಷ. ಅವರು ಈಗಲೇ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಳ್ಳುತ್ತಿದ್ದಾರೆ.