ಮೊದಲ ಜಾಹೀರಾತಿಗೆ ಸಿತಾರಾ ಘಟ್ಟಮನೇನಿ ಪಡೆದ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ..

Updated on: Jul 06, 2023 | 10:45 AM

ಇತ್ತೀಚೆಗೆ ಸಿತಾರಾ ಜ್ಯುವೆಲರಿ ಕಂಪನಿ ಒಂದಕ್ಕೆ ಪ್ರಚಾರ ರಾಯಭಾರಿ ಆಗಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ.

1 / 7
ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾಳೆ. ಅವಳಿಗೆ ಇನ್ನೂ 10 ವರ್ಷ ವಯಸ್ಸು. ಆದಾಗ್ಯೂ ಅವರಿಗೆ ಸಿಕ್ಕಿರುವ ಖ್ಯಾತಿ ತುಂಬಾನೇ ದೊಡ್ಡದು.

ಮಹೇಶ್ ಬಾಬು ಮಗಳು ಸಿತಾರಾ ಘಟ್ಟಮನೇನಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾಳೆ. ಅವಳಿಗೆ ಇನ್ನೂ 10 ವರ್ಷ ವಯಸ್ಸು. ಆದಾಗ್ಯೂ ಅವರಿಗೆ ಸಿಕ್ಕಿರುವ ಖ್ಯಾತಿ ತುಂಬಾನೇ ದೊಡ್ಡದು.

2 / 7

ಮಹೇಶ್ ಬಾಬು ಅವರು ಸಿತಾರಾಳಿಗೆ ಈಗಿನಿಂದಲೇ ಚಿತ್ರರಂಗದ ಜೊತೆ ನಂಟು ಬೆಳೆಸುತ್ತಿದ್ದಾರೆ. ಸಾಕಷ್ಟು ಬ್ರ್ಯಾಂಡ್​ಗಳಿಗೆ ಅವಳು ಅಂಬಾಸಿಡರ್ ಆಗುತ್ತಿದ್ದಾಳೆ.

3 / 7

ಇತ್ತೀಚೆಗೆ ಸಿತಾರಾ ಜ್ಯುವೆಲರಿ ಕಂಪನಿ ಒಂದಕ್ಕೆ ಪ್ರಚಾರ ರಾಯಭಾರಿ ಆಗಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ.

4 / 7

ಹೌದು, ಸಿತಾರಾ ಅವರು ಇತ್ತೀಚೆಗೆ ಜ್ಯುವೆಲರಿ ಕಂಪನಿಯ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಫೋಟೋಶೂಟ್ ಕೂಡ ಮಾಡಿಸಿದ್ದರು. ಇದಕ್ಕಾಗಿ ಅವರು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

5 / 7

 ‘ಸರ್ಕಾರು ವಾರಿ ಪಾಟ’ ಸಿನಿಮಾದ ಪ್ರಮೋಷನಲ್ ಹಾಡಿನಲ್ಲಿ ಸಿತಾರಾ ಹೆಜ್ಜೆಹಾಕಿದ್ದಳು. ಈ ಮೂಲಕ ಆಕೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಳು.

6 / 7

ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಸಿತಾರಾ ಹಲವು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾಳೆ. ಈ ಕಾರಣಕ್ಕೂ ಆಕೆ ಜನಪ್ರಿಯತೆ ಪಡೆದಿದ್ದಾಳೆ.

7 / 7

ಜ್ಯುವೆಲರಿ ಬ್ರ್ಯಾಂಡ್ನವರು ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಟೈಮ್ ಸ್ಕ್ವೇರ್ನಲ್ಲಿ ಸಿತಾರಾಳ ಫೋಟೋ ಅನ್ನು ಪ್ರದರ್ಶನ ಮಾಡಿದ್ದಾರೆ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us