Black Heads: ಬ್ಲ್ಯಾಕ್ ಹೆಡ್ಸ್ ಮುಖದ ಸೌಂದರ್ಯವನ್ನು ಕುಗ್ಗಿಸುತ್ತದೆ. ಅಂದವಾದ ಮುಖದಲ್ಲಿ ಮೂಗಿನ ಮೇಲಿರುವ ಕಪ್ಪು ಚುಕ್ಕಿಗಳು ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಚಿಂತೆ ಬೇಡ. ಇದಕ್ಕೆ ಪರಿಹಾರ ನಿಮ್ಮ ಮನೆಯಲ್ಲೇ ಇದೆ.
ತೆಂಗಿನ ಎಣ್ಣೆ ಬ್ಲ್ಯಾಕ್ ಹೆಡ್ಸ್ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಶುದ್ಧ ತೆಂಗಿನ ಎಣ್ಣೆಯನ್ನು ಮೂಗಿನ ಮೇಲೆ ಹಚ್ಚಿ. ಎಣ್ಣೆ ಚರ್ಮ ಹೀರಿಕೊಳ್ಳಲು ಬಿಡಿ. ದಿನಕ್ಕೆ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚಿ.
1 / 5
ಮಲಗುವ ಮುನ್ನಾ ಅಲೋವೆರಾದ ಜೆಲ್ನ ಮೂಗಿನ ಮೇಲೆ ಹಚ್ಚಿ. ಇಡೀ ರಾತ್ರಿ ಮೂಗಿನ ಮೇಲೆ ಜೆಲ್ ಹಾಗೇ ಇರಬೇಕು.
2 / 5
ಹತ್ತಿಯ ಸಹಾಯದಿಂದ ಶುದ್ಧ ಜೇನುತುಪ್ಪವನ್ನು ಮೂಗಿನ ಮೇಲೆ ಹಚ್ಚಿ. 30 ನಿಮಿಷದ ಬಳಿಕ ಮೂಗನ್ನು ತೊಳೆಯಿರಿ.
3 / 5
ಒಂದು ಟೀ ಚಮಚ ಜೇನುತುಪ್ಪ ಮತ್ತು ಒಂದು ಟೀ ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವನ್ನು ಮೂಗಿಗೆ ಹಚ್ಚಿ. 20ರಿಂದ 30 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ.
4 / 5
ಒಂದು ಟೊಮ್ಯಾಟೋವನ್ನು ಚೆನ್ನಾಗಿ ಮ್ಯಾಶ್ ಮಾಡಿ. ಮ್ಯಾಶ್ ಮಾಡಿದ ಟೊಮ್ಯಾಟೋಗೆ ಒಂದು ಟೀ ಚಮಚ ನಿಂಬೆರಸ ಹಾಕಿ. ಮಿಶ್ರಣ ಮಾಡಿ. ಬಳಿಕ ಬ್ಲ್ಯಾಕ್ ಹೆಡ್ಸ್ ಜಾಗಕ್ಕೆ ಹಚ್ಚಿ.