
ನಟಿ ಸೋನಾಕ್ಷಿ ಸಿನ್ಹಾ ಸ್ಟಾರ್ ಕಿಡ್ ಆದರೂ ಸಿನಿಮಾ ರಂಗದಲ್ಲಿ ಹೇಳಿಕೊಳ್ಳುವಂತಹ ಆಫರ್ಗಳು ಸಿಗುತ್ತಿಲ್ಲ. ಇದಕ್ಕೆ ಕಾರಣ ಸತತ ಸೋಲು. ಸಲ್ಮಾನ್ ಖಾನ್ ಅವರು ಸೋನಾಕ್ಷಿಯನ್ನು ಲಾಂಚ್ ಮಾಡಿದರು. ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ.

ಸದ್ಯ, ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ ಸೋನಾಕ್ಷಿ. ಅವರು ತಮ್ಮ ವೈಯಕ್ತಿಕ ವಿಚಾರದಿಂದ ಹೆಚ್ಚು ಸುದ್ದಿಯಲ್ಲಿ ಇದ್ದಾರೆ.

ಸೋನಾಕ್ಷಿ ಅವರು ಇತ್ತೀಚೆಗೆ ಎಂಗೇಜ್ಮೆಂಟ್ ವಿಚಾರದಿಂದ ಸುದ್ದಿ ಆಗಿದ್ದರು. ಅವರ ಕೈಯಲ್ಲಿರುವ ರಿಂಗ್ ಹೈಲೈಟ್ ಆಗುವ ಫೋಟೋ ಹಾಕಿದ್ದರು.

ಈಗ ಸೋನಾಕ್ಷಿ ಸಿಂಗಾಪುರ್ನಲ್ಲಿದ್ದಾರೆ. ಅದರ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.

ಸೋನಾಕ್ಷಿ ಅವರು ಈ ಮೊದಲು ಸಖತ್ ದಪ್ಪ ಇದ್ದರು. ಈ ಕಾರಣಕ್ಕೆ ಅವರಿಗೆ ಅನೇಕರು ಬಾಡಿ ಶೇಮಿಂಗ್ ಮಾಡಿದ್ದರು. ನಂತರ ಜಿಮ್ನಲ್ಲಿ ಬೆವರು ಹರಿಸಿ ದೇಹದ ತೂಕ ಇಳಿಸಿಕೊಂಡರು.
Published On - 3:48 pm, Sun, 5 June 22