ನೂರಾರು ವರ್ಷಗಳ ಮರ, ಶತಮಾನಗಳ ಹಿಂದಿನ ವಿಗ್ರಹ. ಒಂದಲ್ಲ ಎರಡಲ್ಲ ಬರೋಬ್ಬರಿ 6 ಲಕ್ಷ ವಿವಿಧ ಬಗೆಯ ಸಸಿಗಳು. ಇದನ್ನ ಒಂದು ರೀತಿ ಸಸ್ಯಕಾಶಿ, ಪುರಾತನ ಕಲೆಗಳ ಬೀಡು ಅಂದರೂ ತಪ್ಪಿಲ್ಲ. ಆದ್ರೆ ಇದೆಲ್ಲ ಇರೋದು ಯಾವುದೋ ಮ್ಯೂಸಿಯಂನಲ್ಲಿ ಅಲ್ಲ; ಬದಲಾಗಿ ನಮ್ಮದೆ ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿರುವ ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ. ಹಾಗಾದ್ರೆ ಯಾವೆಲ್ಲ ವಿಶೇಷತೆಗಳೊಂದಿಗೆ, ಹೇಗಿದೆ ಕೆಂಪೇಗೌಡ ಏರ್ಪೋಟ್ ಟರ್ಮಿನಲ್ 2 ಅನ್ನೋದನ್ನ ಚಿತ್ರಗಳಲ್ಲಿ ನೊಡೋಣ ಬನ್ನಿ. ಹೆಚ್ಎಎಲ್ ವಿಮಾನ ನಿಲ್ದಾಣದಿಂದ ದೂರವಾಗಿ 2008 ರಲ್ಲಿ ದೇವನಹಳ್ಳಿ ಬಳಿ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ದಾಣವು 4 ಸಾವಿರ ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣವು ತಲೆ ಎತ್ತಿತು.