Updated on: May 26, 2023 | 7:30 AM
ಕನ್ನಡದ ನಟಿ ಶ್ರೀಲೀಲಾ ಸುಂದರಿ ಹಾಗೂ ಪ್ರತಿಭಾವಂತೆ ಸಹ. ಕನ್ನಡದಲ್ಲಿ ಹೆಸರು ಗಳಿಸಿ ಈಗ ಪರಭಾಷೆಗಳಲ್ಲಿಯೂ ಬ್ಯುಸಿಯಾಗಿದ್ದಾರೆ.
ರವಿತೇಜ ಜೊತೆಗೆ ಧಮಾಕಾ ಸಿನಿಮಾದಲ್ಲಿ ನಟಿಸಿದ್ದ ಶ್ರೀಲೀಲಾಗೆ ತೆಲುಗು ಚಿತ್ರರಂಗದಿಂದ ಸಾಲು-ಸಾಲು ಅವಕಾಶಗಳು ಸಿಗುತ್ತಿವೆ.
ಮಹೇಶ್ ಬಾಬು ಜೊತೆಗೆ ಅವರ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣವೂ ನಡೆಯುತ್ತಿದೆ.
ನಂದಮೂರಿ ಬಾಲಕೃಷ್ಣರ 108ನೇ ಸಿನಿಮಾಕ್ಕೂ ಶ್ರೀಲೀಲಾ ನಾಯಕಿ. ಪ್ರಸ್ತುತ ಅವರ ಕೈಯಲ್ಲಿ ಏಳು ತೆಲುಗು ಸಿನಿಮಾಗಳಿವೆ.
2019 ರಲ್ಲಿ ಕನ್ನಡದ ಕಿಸ್ ಸಿನಿಮಾ ಮೂಲಕ ಪದಾರ್ಪಣೆ ಮಾಡಿದ ಶ್ರೀಲೀಲಾ ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ಶ್ರೀಲೀಲಾಗೆ ಉಜ್ವಲ ಭವಿಷ್ಯವಿದೆ.
ಶ್ರೀಲೀಲಾ