ತಿರುಪತಿ ದೇವಸ್ಥಾನದ ಬಳಿ ಭಿಕ್ಷುಕನ ಕೊಠಡಿಯಲ್ಲಿ ಸಿಕ್ಕಿದ್ದೇನು ಗೊತ್ತಾ!?

ಚಿಕ್ಕ ವಯಸ್ಸಿನಲ್ಲೇ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ಸೇರಿಕೊಂಡ ಶ್ರೀನಿವಾಸ, ತಿಮ್ಮಪ್ಪ ದೇವರ ಮೇಲೆ ಅಪಾರ ಭಕ್ತಿ, ವಿಶ್ವಾಸ ಹೊಂದಿದ್ದ. ಆತ ಮೃದು ಹೃದಯಿಯಾಗಿದ್ದ. ಸರಳವಾಗಿ ಜೀವನ ನಡೆಸುತ್ತಿದ್ದ ಶ್ರೀನಿವಾಸನನ್ನು ಕಂಡರೆ ಭಕ್ತರಿಗೆ ಒಳ್ಳೆಯ ಭಾವ ಮೂಡುತ್ತಿತ್ತು. ಆತನ ಕೈಯಿಂದ ತಪ್ಪದೆ ತಿಮ್ಮಪ್ಪನ ನಾಮ ಹಾಕಿಸಿಕೊಳ್ಳುತ್ತಿದ್ದರು.

  • Updated On - 3:44 pm, Tue, 18 May 21 Edited By: Ayesha Banu
1/7
Srinivasa 64 year old beggar died at Lord Tirupati temple police recover lakhs of rupees from his house in Seshachal Nagar 0
ವಿಐಪಿಗಳಿಂದ ದಕ್ಷಿಣೆ ಪಡೆಯುವುದೇ ಈತನ ಕಾಯಕವಾಗಿತ್ತು. ಅದೊಮ್ಮೆ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದಾಗ ಶ್ರೀನಿವಾಸ ದೀಪಿಕಾ ಪಡುಕೋಣೆಯನ್ನು ಹಿಂಬಾಲಿಸಿದ್ದ. ಆಗ ನಟಿ ದೀಪಿಕಾ ಆತನಿಗೆ ದಕ್ಷಿಣೆ ರೂಪದಲ್ಲಿ ಒಂದಷ್ಟು ಹಣ ನೀಡದ್ದರು.
2/7
ತಿರುಪತಿ ದೇವಸ್ಥಾನದ ಬಳಿಯಿದ್ದ ಭಿಕ್ಷುಕ ಮೃತಪಟ್ಟ ನಂತರ ಸುತ್ತಮುತ್ತಲ ಜನ ಆತನ ಮನೆಯೊಳಗೆ ನುಸುಳಲು ಪ್ರಯತ್ನಿಸಿದ್ದರು. ಆತನ ಮನೆಯನ್ನು ತಮ್ಮದಾಗಿಸಿಕೊಳ್ಳಲು ಯತ್ನಸಿದ್ದರು. ಆದರೆ ಸ್ಥಳೀಯ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಅದನ್ನು ತಡೆದಿದ್ದಾರೆ.
3/7
ಪೆಟ್ಟಿಗೆಗಳಲ್ಲಿತ್ತು ಕಂತೆ ಕಂತೆ ನೋಟುಗಳು... 64 ವರ್ಷದ ಭಿಕ್ಷುಕ ಶ್ರೀನಿವಾಸನಿಗೆ ತನ್ನ ಕುಟುಂಬಸ್ಥರು ಅಂತಾ ಯಾರೂ ಇರಲಿಲ್ಲ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನೆ ಶೋಧಿಸಿದಾಗ 6 ಲಕ್ಷ 15 ಸಾವಿರದ 50 ರೂಪಾಯಿ ಸಿಕ್ಕಿದೆ. ಅಧಿಕಾರಿಗಳಿಗೆ ನೋಟ್​ ಕೌಂಟಿಂಗ್ ಮಷಿನ್​ಗಳಲ್ಲಿ ಅಷ್ಟೂ ಹಣವನ್ನು ಎಣಿಸಬೇಕಾಯಿತು.
4/7
64 ವರ್ಷದ ಶ್ರೀನಿವಾಸ ತಿರುಮಲದಲ್ಲಿ ಶ್ರೀನಿವಾಸನ ದರ್ಶನಕ್ಕೆ ಬರುವ ವಿಐಪಿ ಭಕ್ತರಿಗೆ ಹಣೆಗೆ ನಾಮ ಹಚ್ಚಿ, ಅವರಿಂದ ಭಕ್ತಿಭಾವದಿಂದ ಹಣ ಬೇಡುತ್ತಿದ್ದ.
5/7
ಪೆಟ್ಟಿಗೆಗಳಲ್ಲಿತ್ತು ಕಂತೆ ಕಂತೆ ನೋಟುಗಳು... 64 ವರ್ಷದ ಭಿಕ್ಷುಕ ಶ್ರೀನಿವಾಸನಿಗೆ ತನ್ನ ಕುಟುಂಬಸ್ಥರು ಅಂತಾ ಯಾರೂ ಇರಲಿಲ್ಲ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಆತನ ಮನೆ ಶೋಧಿಸಿದಾಗ 6 ಲಕ್ಷ 15 ಸಾವಿರದ 50 ರೂಪಾಯಿ ಸಿಕ್ಕಿದೆ. ಅಧಿಕಾರಿಗಳಿಗೆ ನೋಟ್​ ಕೌಂಟಿಂಗ್ ಮಷಿನ್​ಗಳಲ್ಲಿ ಅಷ್ಟೂ ಹಣವನ್ನು ಎಣಿಸಬೇಕಾಯಿತು.
6/7
ತಿರುಪತಿ ದೇವಸ್ಥಾನದ ಬಳಿ ಮೃತಪಟ್ಟ ಭಿಕ್ಷುಕ ಶ್ರೀನಿವಾಸನ ಮನೆಯಲ್ಲಿ ಸಿಕ್ಕಿದ್ದ ಹಣವೆಲ್ಲಾ ಈಗ ಆಂಧ್ರ ಸರ್ಕಾರದ ಟ್ರೆಶರಿ ಸೇರಿದೆ.
7/7