Radhe: ಸಲ್ಮಾನ್ ಖಾನ್​ ಬಾಡಿ ಡಬಲ್ ಕಲಾವಿದನ ಫೋಟೋ ವೈರಲ್; ಫ್ಯಾನ್ಸ್​​ಗೆ ಅಚ್ಚರಿಯೋ ಅಚ್ಚರಿ

Salman Khan: ಸಲ್ಮಾನ್ ಖಾನ್ ಅಭಿನಯದ ‘ರಾಧೆ: ಯುವರ್ ಮೋಸ್ಟ್ ವಾಟೆಂಟ್ ಭಾಯ್’ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್​ಗೆ ಬಾಡಿ ಡಬಲ್ ಆಗಿ ನಟಿಸಿರುವ ಪರ್ವೇಜ್ ಕಾಜಿ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದನ್ನು ಕಂಡು ಸಿನಿಪ್ರಿಯರು ಅಚ್ಚರಿ ಪಡುತ್ತಿದ್ದಾರೆ.

1/7
ಸಿನಿಮಾದ ಕೆಲವು ದೃಶ್ಯಗಳಲ್ಲಿ ಸ್ಟಾರ್ ನಟರ ಬದಲಿಗೆ ಮುಖ ಕಾಣದಂತೆ ನಟಿಸುವ ಕಲಾವಿದರಿಗೆ ಬಾಡಿ ಡಬಲ್ ಎನ್ನುತ್ತಾರೆ. ಸಲ್ಮಾನ್ ಖಾನ್ ಅವರಿಗೆ ಬಾಡಿ ಡಬಲ್ ಆಗಿ ನಟಿಸುವ ಮೂಲಕ ಪರ್ವೇಜ್ ಕಾಜಿ ಫೇಮಸ್ ಆಗಿದ್ದಾರೆ.
2/7
ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಲ್ಲಿ ಪರ್ವೇಜ್ ಕಾಜಿ ಕೆಲಸ ಮಾಡಿದ್ದಾರೆ. ‘ರಾಧೆ: ಯುವರ್ ಮೋಸ್ಟ್ ವಾಂಡೆಟ್ ಭಾಯ್’ ಚಿತ್ರ ಬಿಡುಗಡೆ ಆದ ನಂತರ ಪರ್ವೇಜ್ ಫೋಟೋಗಳು ವೈರಲ್ ಆಗಿವೆ.
3/7
ರಾಧೆ ಮಾತ್ರವಲ್ಲದೆ ಭಾರತ್, ಟ್ಯೂಬ್ ಲೈಟ್, ರೇಸ್ 3, ಸುಲ್ತಾನ್ ಮುಂತಾದ ಸಿನಿಮಾಗಳಲ್ಲಿ ಸಲ್ಮಾನ್ ಖಾನ್​ಗೆ ಬಾಡಿ ಡಬಲ್ ಆಗಿ ಪೆರ್ವೇಜ್ ಕಾಜಿ ನಟಿಸಿದ್ದಾರೆ. ಆ ಮೂಲಕ ಸಲ್ಲು ಜೊತೆ ಅವರು ಆಪ್ತತೆ ಬೆಳೆಸಿಕೊಂಡಿದ್ದಾರೆ.
4/7
ಸಲ್ಮಾನ್ ಖಾನ್ ಮತ್ತು ಪರ್ವೇಜ್ ಕಾಜಿ ನಡುವೆ ಸಾಕಷ್ಟು ಸಾಮ್ಯತೆ ಇದೆ. ಹಾಗಾಗಿ ಅವರನ್ನು ಪ್ರತಿ ಸಿನಿಮಾದಲ್ಲಿ ಬಾಡಿ ಡಬಲ್ ಆಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪರ್ವೇಜ್ ಅವರ ಫೋಟೋಗಳು ವೈರಲ್ ಆಗುತ್ತಿವೆ.
5/7
ಸಲ್ಮಾನ್ ಖಾನ್ರ ಅವಳಿ ಸಹೋದರನೇನೊ ಎಂಬಂತೆ ಇರುವ ಪರ್ವೇಜ್ ಕಾಜಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಅವರು ಪಕ್ಕಾ ಸಲ್ಮಾನ್ ರೀತಿಯೇ ಕಾಣಿಸುತ್ತಿದ್ದು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.
6/7
ಸಲ್ಮಾನ್ ಖಾನ್ ರೀತಿಯೇ ಹಾವ-ಭಾವ ರೂಢಿಸಿಕೊಂಡಿರುವ ಪರ್ವೇಜ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ರೀತಿ ಕಾಣಲು ಅವರು ಬಾಡಿ ಬಿಲ್ಡಿಂಗ್ ಕೂಡ ಮಾಡುತ್ತಾರೆ. ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುತ್ತಾರೆ.
7/7
ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದಂತೆ ಅವರು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳಿಂದ ಸಲ್ಮಾನ್ ಖಾನ್​ರ ಬಳಗದಲ್ಲಿ ಪರ್ವೇಜ್ ಕಾಜಿ ಗುರುತಿಸಿಕೊಂಡಿದ್ದಾರೆ. ಅನೇಕ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.