- Kannada News Photo gallery Salman khan body double parvez kazi photo goes viral after radhe movie release mdn
Radhe: ಸಲ್ಮಾನ್ ಖಾನ್ ಬಾಡಿ ಡಬಲ್ ಕಲಾವಿದನ ಫೋಟೋ ವೈರಲ್; ಫ್ಯಾನ್ಸ್ಗೆ ಅಚ್ಚರಿಯೋ ಅಚ್ಚರಿ
Salman Khan: ಸಲ್ಮಾನ್ ಖಾನ್ ಅಭಿನಯದ ‘ರಾಧೆ: ಯುವರ್ ಮೋಸ್ಟ್ ವಾಟೆಂಟ್ ಭಾಯ್’ ಸಿನಿಮಾ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ಬಾಡಿ ಡಬಲ್ ಆಗಿ ನಟಿಸಿರುವ ಪರ್ವೇಜ್ ಕಾಜಿ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದನ್ನು ಕಂಡು ಸಿನಿಪ್ರಿಯರು ಅಚ್ಚರಿ ಪಡುತ್ತಿದ್ದಾರೆ.
Updated on:May 18, 2021 | 11:18 AM

ಸಿನಿಮಾದ ಕೆಲವು ದೃಶ್ಯಗಳಲ್ಲಿ ಸ್ಟಾರ್ ನಟರ ಬದಲಿಗೆ ಮುಖ ಕಾಣದಂತೆ ನಟಿಸುವ ಕಲಾವಿದರಿಗೆ ಬಾಡಿ ಡಬಲ್ ಎನ್ನುತ್ತಾರೆ. ಸಲ್ಮಾನ್ ಖಾನ್ ಅವರಿಗೆ ಬಾಡಿ ಡಬಲ್ ಆಗಿ ನಟಿಸುವ ಮೂಲಕ ಪರ್ವೇಜ್ ಕಾಜಿ ಫೇಮಸ್ ಆಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಲ್ಲಿ ಪರ್ವೇಜ್ ಕಾಜಿ ಕೆಲಸ ಮಾಡಿದ್ದಾರೆ. ‘ರಾಧೆ: ಯುವರ್ ಮೋಸ್ಟ್ ವಾಂಡೆಟ್ ಭಾಯ್’ ಚಿತ್ರ ಬಿಡುಗಡೆ ಆದ ನಂತರ ಪರ್ವೇಜ್ ಫೋಟೋಗಳು ವೈರಲ್ ಆಗಿವೆ.

ರಾಧೆ ಮಾತ್ರವಲ್ಲದೆ ಭಾರತ್, ಟ್ಯೂಬ್ ಲೈಟ್, ರೇಸ್ 3, ಸುಲ್ತಾನ್ ಮುಂತಾದ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ಗೆ ಬಾಡಿ ಡಬಲ್ ಆಗಿ ಪೆರ್ವೇಜ್ ಕಾಜಿ ನಟಿಸಿದ್ದಾರೆ. ಆ ಮೂಲಕ ಸಲ್ಲು ಜೊತೆ ಅವರು ಆಪ್ತತೆ ಬೆಳೆಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಮತ್ತು ಪರ್ವೇಜ್ ಕಾಜಿ ನಡುವೆ ಸಾಕಷ್ಟು ಸಾಮ್ಯತೆ ಇದೆ. ಹಾಗಾಗಿ ಅವರನ್ನು ಪ್ರತಿ ಸಿನಿಮಾದಲ್ಲಿ ಬಾಡಿ ಡಬಲ್ ಆಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಪರ್ವೇಜ್ ಅವರ ಫೋಟೋಗಳು ವೈರಲ್ ಆಗುತ್ತಿವೆ.

ಸಲ್ಮಾನ್ ಖಾನ್ರ ಅವಳಿ ಸಹೋದರನೇನೊ ಎಂಬಂತೆ ಇರುವ ಪರ್ವೇಜ್ ಕಾಜಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಅವರು ಪಕ್ಕಾ ಸಲ್ಮಾನ್ ರೀತಿಯೇ ಕಾಣಿಸುತ್ತಿದ್ದು ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ರೀತಿಯೇ ಹಾವ-ಭಾವ ರೂಢಿಸಿಕೊಂಡಿರುವ ಪರ್ವೇಜ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ರೀತಿ ಕಾಣಲು ಅವರು ಬಾಡಿ ಬಿಲ್ಡಿಂಗ್ ಕೂಡ ಮಾಡುತ್ತಾರೆ. ಫಿಟ್ನೆಸ್ಗೆ ಹೆಚ್ಚು ಮಹತ್ವ ನೀಡುತ್ತಾರೆ.

ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದಂತೆ ಅವರು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳಿಂದ ಸಲ್ಮಾನ್ ಖಾನ್ರ ಬಳಗದಲ್ಲಿ ಪರ್ವೇಜ್ ಕಾಜಿ ಗುರುತಿಸಿಕೊಂಡಿದ್ದಾರೆ. ಅನೇಕ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.
Published On - 11:15 am, Tue, 18 May 21




