ರಾಜ್ಯ ಮಟ್ಟದ ಟಗರು ಕಾಳಗ ಸ್ಪರ್ಧೆ: ಇಂತಹ ಜಗ ಜಟ್ಟಿಗಳ ಕಾಳಗ ನೋಡಿದ್ದೀರಾ? ಇದೂ ದಾವಣಗೆರೆ ಸ್ಪೆಷಲ್!
ಅದು ನಿಜಕ್ಕೂ ಜಟ್ಟಿಗಳ ಕಾಳಗ. ಇದಕ್ಕಾಗಿ ಮನೆತನಗಳನ್ನೆ ಪಣಕ್ಕಿಟ್ಟು ಈ ಜಟ್ಟಿ ಕಾಳಗ ಆಡಿಸಿದ ಇತಿಹಾಸವಿದೆ. ಆ ಕಾಳಗ ನೋಡುತ್ತಿದ್ದರೆ ಒಂದು ರೀತಿಯಲ್ಲಿ ರೋಮಾಂಚನವಾಗುತ್ತದೆ. ಇಲ್ಲಿ ಸೋಲು ಗೆಲುವೇ ಭಾರೀ ಮಹತ್ವ. ಎರಡು ವರ್ಷಗಳ ನಿರಂತರ ತಾಲೀಮು ಮಾಡಿ ಬಂದ ಜಟ್ಟಿಗಳು ಅಖಾಡದಲ್ಲಿ ನಡೆಸುವ ಜಿದ್ದಾಜಿದ್ದಿನ ಹೋರಾಟ ಮಾತ್ರ ಮೆಚ್ಚಲೇ ಬೇಕು. ಇಲ್ಲಿದೆ ನೋಡಿ ಕಾಳಗದ ಅಸಲಿಯತ್ತು.
1 / 9

2 / 9
ಇದೂ ಒಂದು ರೀತಿಯ ದಾವಣಗೆರೆ ಸ್ಪೆಷಲ್. ಕಾರಣ ಇಲ್ಲಿ ಮನೆಗೊಂದು ಟಗರು ಎಂಬ ವಾತಾವರಣ ಇತ್ತು. ಆದ್ರೆ ಈಗ ಪ್ರಮಾಣ ಕಡಿಮೆ ಆಗಿದೆ. ಆದ್ರೆ ಆ ಸ್ಪರ್ಧೆ ತೀವ್ರತೆ ಮಾತ್ರ ಕಮ್ಮಿ ಆಗಿಲ್ಲ. ವಿಶೇಷವಾಗಿ ಎರಡು ವರ್ಷಕ್ಕೊಮ್ಮೆ ನಡೆಯುವ ರಾಜ್ಯ ಮಟ್ಟದ ಟಗರು ಕಾಳಗ ಸ್ಪರ್ಧೆ (State Level Tagaru Compition). ಈ ಸ್ಪರ್ಧೆ ಒಂದು ರೀತಿಯಲ್ಲಿ ಭಾರೀ ಸ್ಪೆಷಲ್. ಕಾರಣ ಇಡಿ ರಾಜ್ಯದ ಟಗರುಗಳು ಇಲ್ಲಿಗೆ ಬರುತ್ತವೆ.
3 / 9
ಹೀಗಾಗಿ ದಾವಣಗೆರೆ ನಗರದ ವಿನೋಭನಗರದ ಚೌಡೇಶ್ವರಿ ದೇವತೆ ಜಾತ್ರೆ ಪ್ರಯುಕ್ತ ಅರುಣಾ ಸರ್ಕಲ್ ಬಳಿಯ ವಾಣಿ ಹೊಂಡಾ ಶೋ ರೂಮ್ ಮೈದಾನದಲ್ಲಿ ಚೌಡೇಶ್ವರಿ ದೇವಿ ಜಾತ್ರೆಯ ಸ್ಪೇಷಲ್ ಕೂಡಾ ಈ ಕಾಳಗ.
4 / 9
ನಿರಂತರ ಅಭ್ಯಾಸ ಹಾಗೂ ಕಾಳಗಕ್ಕಾಗಿ ಸಜ್ಜಾದ ಟಗರುಗಳು ಹಿಂದೆ ಸರಿದು ಮುಂದೆ ನುಗ್ಗಿದರೇ ಅಲ್ಲಿ ಸೃಷ್ಟಿಯಾಗುವ ಢಗ್ ಎಂಬ ಶಬ್ದಕ್ಕೆ ಇಡಿ ಜನಸ್ತೋಮ ಕೇಕೆ ಹಾಕುತ್ತಿತ್ತು. ಎರಡು ಟಗರುಗಳು ಮಹಾರಾಷ್ಟ್ರದಿಂದ ಸಹ ಬಂದಿದ್ದವು. ಅವು ನಾ ಮುಂದೆ ತಾ ಮುಂದೆ ಎಂದು ಪರಸ್ಪರ ಡಿಚ್ಚಿ ಹೊಡೆಯುತ್ತಿರುವ ರೀತಿಯಲ್ಲಿ ಸಜ್ಜಾಗಿದ್ದವು. ಜನ ತುದಿಗಾಲ ಮೇಲೆ ನಿಂತು ನೋಡುತ್ತಿದ್ದರು.
5 / 9
ಇದರಲ್ಲಿ 100ಕ್ಕೂ ಹೆಚ್ಚು ಮರಿ ಟಗರುಗಳು, ಎಂಟು ಹಲ್ಲಿನ 60, ಆರು ಹಲ್ಲಿನ 90, ನಾಲ್ಕು ಹಲ್ಲಿನ 20 ಹಾಗೂ ಎರಡು ಹಲ್ಲಿನ 32 ಟಗರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ತಮ್ಮ ಕಸರತ್ತು ಪ್ರದರ್ಶನ ಮಾಡಿದವು ಎಂದು ಶ್ರೀನಿವಾಸ ದಾಸ್ ಕರಿಯಪ್ಪ, ಟಗರು ಕಾಳಗ ಸಂಘಟಕ, ತಿಳಿಸಿದರು.
6 / 9

7 / 9
8 / 9

9 / 9
ಹೀಗೆ ಐದು ವಿಭಾಗದಲ್ಲಿ ಗೆದ್ದರೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುತ್ತದೆ. ಆರು ಮತ್ತು ಎಂಟು ಹಲ್ಲಿನ ಟಗರುಗಳಿಗೆ ನಗದು ನೀಡಿ ಗೌರವಿಸಲಾಯಿತು. ಹಾವೇರಿ, ಬೆಳಗಾವಿ, ದಾವಣಗೆರೆ, ಬಾಗಲಕೋಟೆ, ಜಮಖಂಡಿ ಹಾಗೂ ಬಳ್ಳಾರಿಯ ಟಗರುಗಳು ಪ್ರಶಸ್ತಿ ಗೆದ್ದುಕೊಂಡವು. ಇಂತಹ ಅಪರೂಪದ ಸ್ಪರ್ಧೆಗೆ ಸಾವಿರಾರು ಜನ ಸಾಕ್ಷಿಯಾದರು