
ಸುಮಲತಾ ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ ಖ್ಯಾತ ಕಲಾವಿದರಾದ ಯಶ್, ರಾಧಿಕಾ ಪಂಡಿತ್, ದರ್ಶನ್, ಪ್ರಿಯಾಂಕಾ ಉಪೇಂದ್ರ ಮುಂತಾದವರು ಭಾಗಿ ಆಗಿದ್ದರು. ಎಲ್ಲರೂ ಸುಮಲತಾಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

ತಾಯಿಯ ಹುಟ್ಟುಹಬ್ಬವನ್ನು ಅಭಿಷೇಕ್ ಅಂಬರೀಷ್ ಅವರು ಸಡಗರದಿಂದ ಆಚರಿಸಿದ್ದಾರೆ. ಔತಣಕೂಟಕ್ಕೆ ಬಂದ ಸ್ನೇಹಿತರ ಜೊತೆ ಅವರು ಖುಷಿಯಿಂದ ಕಾಲ ಕಳೆದಿದ್ದಾರೆ.

ಯಶ್, ದರ್ಶನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಈ ಸಂಭ್ರಮದ ಕ್ಷಣಗಳಲ್ಲಿ ಭಾಗಿ ಆಗಿದ್ದರು. ಈ ಫೋಟೋಗಳನ್ನು ಸುಮಲತಾ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ರಾಜಕೀಯದಲ್ಲಿ ಬ್ಯುಸಿ ಆಗಿರುವ ಸುಮಲತಾ ಅವರು ಚಿತ್ರರಂಗದ ಆಪ್ತರ ಜೊತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ತಮ್ಮ ಆಪ್ತರಿಗಾಗಿ ಅವರು ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು.

ತಮ್ಮ ಪ್ರೀತಿಪಾತ್ರ ಜನರ ಜೊತೆ ಜನ್ಮದಿನ ಆಚರಿಸಿಕೊಂಡು ಸಮಲತಾ ಖುಷಿಪಟ್ಟಿದ್ದಾರೆ. ಅಭಿಮಾನಿಗಳು ಕೂಡ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ.

ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿರುವ ಯಶ್, ದರ್ಶನ್, ಅಭಿಷೇಕ್, ಸುಮಲತಾ ಅಂಬರೀಷ್, ರಾಕ್ಲೈನ್ ವೆಂಕಟೇಶ್, ಗುರುಕಿರಣ್, ಸುಧಾಕರ್ ಅವರ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.