- TV9 Kannada Kannada News Photos Sumit Nagal defeat 38th ranked Matteo Arnaldi at Monte Carlo Masters
Monte Carlo Masters: ಕ್ಲೇ ಕೋರ್ಟ್ನಲ್ಲಿ ಇತಿಹಾಸ ನಿರ್ಮಿಸಿದ ಸುಮಿತ್ ನಗಾಲ್..!
Monte Carlo Masters: ಭಾರತದ ನಂಬರ್ 1 ಟೆನಿಸ್ ಸ್ಟಾರ್ ಸುಮಿತ್ ನಗಾಲ್ ಸೋಮವಾರ ಫ್ರಾನ್ಸ್‌ನ ಮಾಂಟೆ ಕಾರ್ಲೊದಲ್ಲಿ ನಡೆದ ಎಟಿಪಿ ಮಾಸ್ಟರ್ಸ್ ಕ್ಲೇಕೋರ್ಟ್ ಪಂದ್ಯಾವಳಿಯಲ್ಲಿ ವಿಶ್ವದ 38ನೇ ಶ್ರೇಯಾಂಕದ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಸೋಲಿಸುವ ಮೂಲಕ ಮುಖ್ಯ ಡ್ರಾ ಸಿಂಗಲ್ಸ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ.
Updated on:Apr 08, 2024 | 10:09 PM

ಭಾರತದ ನಂಬರ್ 1 ಟೆನಿಸ್ ಸ್ಟಾರ್ ಸುಮಿತ್ ನಗಾಲ್ ಸೋಮವಾರ ಫ್ರಾನ್ಸ್‌ನ ಮಾಂಟೆ ಕಾರ್ಲೊದಲ್ಲಿ ನಡೆದ ಎಟಿಪಿ ಮಾಸ್ಟರ್ಸ್ ಕ್ಲೇಕೋರ್ಟ್ ಪಂದ್ಯಾವಳಿಯಲ್ಲಿ ವಿಶ್ವದ 38ನೇ ಶ್ರೇಯಾಂಕದ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಸೋಲಿಸುವ ಮೂಲಕ ಮುಖ್ಯ ಡ್ರಾ ಸಿಂಗಲ್ಸ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಅರ್ಹತಾ ಪಂದ್ಯಾವಳಿಯನ್ನು ಆಡುವ ಮೂಲಕ ಎಟಿಪಿ ಮಾಸ್ಟರ್ಸ್ 1000 ಪಂದ್ಯಾವಳಿಗೆ ಪ್ರವೇಶ ಪಡೆದಿದ್ದ ನಗಾಲ್, ತಮ್ಮ ಇಟಾಲಿಯನ್ ಎದುರಾಳಿ ಮ್ಯಾಟಿಯೊ ಅರ್ನಾಲ್ಡಿ ಅವರನ್ನು 5-7, 6-2, 6-4 ಸೆಟ್ಗಳಿಂದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಬಹಳ ರೋಚಕತೆಯಿಂದ ಕೂಡಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು 5-7 ಅಂತರದಿಂದ ಮ್ಯಾಟಿಯೊ ಅರ್ನಾಲ್ಡಿ ಗೆದ್ದುಕೊಂಡ್ಡರು. ಆದರೆ ಆ ಬಳಿಕ ಪುಟಿದೆದ್ದ ನಗಾಲ್ ಉಳಿದೆರಡು ಸೆಟ್ಗಳನ್ನು 6-2, 6-4 ರಿಂದ ಗೆಲ್ಲುವ ಮೂಲಕ ಪಂದ್ಯವನ್ನು ತನ್ನದಾಗಿಸಿಕೊಂಡರು.

ಇದೀಗ ನಗಾಲ್ ತಮ್ಮ ಮುಂದಿನ ಸುತ್ತಿನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನದಲ್ಲಿರುವ ಡೆನ್ಮಾರ್ಕ್ನ ಹೊಲ್ಗರ್ ರೂನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಏಪ್ರಿಲ್ 10 ರಂದು ನಡೆಯಲ್ಲಿದೆ.

ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಮಣಿಸುವುದರೊಂದಿಗೆ ನಗಾಲ್ ಈ ಸೀಸನ್ನಲ್ಲಿ ದಾಖಲೆಯ ಎರಡನೇ ಬಾರಿಗೆ ಒಟ್ಟಾರೆ ಮೂರನೇ ಬಾರಿಗೆ ಅಗ್ರ 50 ರೊಳಗಿನ ಶ್ರೇಯಾಂಕಿತ ಆಟಗಾರನನ್ನು ಸೋಲಿಸಿದ ದಾಖಲೆ ನಿರ್ಮಿಸಿದ್ದಾರೆ.

ಇದಕ್ಕೂ ಮೊದಲು ನಗಾಲ್, ಈ ಸೀಸನ್ ಆರಂಭದಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ವಿಶ್ವದ 27 ನೇ ಶ್ರೇಯಾಂಕದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದರು.

ಇದಲ್ಲದೆ, ಮಾರ್ಚ್ 2021 ರಲ್ಲಿ ನಗಾಲ್ ವಿಶ್ವದ 22ನೇ ಶ್ರೇಯಾಂಕದಲ್ಲಿದ್ದ ಚಿಲಿಯ ಕ್ರಿಸ್ಟಿಯನ್ ಗ್ಯಾರಿನ್ ಅವರನ್ನು ಮಣಿಸಿದ್ದರು.

ಇದಕ್ಕೂ ಮೊದಲು ಎಟಿಪಿ ಮಾಸ್ಟರ್ಸ್ ಕ್ಲೇಕೋರ್ಟ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನಾಗಲ್ 63ನೇ ಶ್ರೇಯಾಂಕದ ಇಟಲಿಯ ಫ್ಲಾವಿಯೊ ಕೊಬೊಲಿ ಮತ್ತು ನಂತರ 55ನೇ ಶ್ರೇಯಾಂಕದ ಅರ್ಜೆಂಟೀನಾದ ಡಯಾಜ್ ಅಕೋಸ್ಟಾ ಅವರನ್ನು ಸೋಲಿಸುವ ಮೂಲಕ ಪಂದ್ಯಾವಳಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.
Published On - 10:07 pm, Mon, 8 April 24

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



