- Kannada News Photo gallery Cricket photos IPL 2024 kl rahul completed 1000 runs for lucknow super giants
IPL 2024: ಲಕ್ನೋ ಪರ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್..!
IPL 2024 KL Rahul: ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 5 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ತಂಡದ ಪರ ಸ್ಟೋಯ್ನಿಸ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನಾಯಕನ ಆಟ ಆಡಿದ ರಾಹುಲ್ 33 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ರಾಹುಲ್ ಲಕ್ನೋ ಪರ ಅಪರೂಪದ ದಾಖಲೆ ಕೂಡ ನಿರ್ಮಿಸಿದರು.
Updated on: Apr 08, 2024 | 6:27 PM

ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 33 ರನ್‌ಗಳ ಅಮೋಘ ಜಯ ಸಾಧಿಸಿದ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್‌ಜೈಂಟ್ಸ್ ತಂಡ ಲೀಗ್ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 5 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ತಂಡದ ಪರ ಸ್ಟೋಯ್ನಿಸ್ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ನಾಯಕನ ಆಟ ಆಡಿದ ರಾಹುಲ್ 33 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಲಕ್ನೋ ಪರ ಅಪರೂಪದ ದಾಖಲೆ ಕೂಡ ನಿರ್ಮಿಸಿದರು.

ಗುಜರಾತ್ ಟೈಟಾನ್ಸ್ ವಿರುದ್ಧ 31 ಎಸೆತಗಳನ್ನಾಡಿದ್ದ ರಾಹುಲ್ 3 ಬೌಂಡರಿಗಳ ಸಹಿತ 33 ರನ್ ಗಳಿಸಿದರು. ಇದರೊಂದಿಗೆ ಲಕ್ನೋ ಸೂಪರ್‌ಜೈಂಟ್ಸ್ ಪರ 1000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಈ ಪಂದ್ಯಕ್ಕೂ ಮುನ್ನ ರಾಹುಲ್ ಲಕ್ನೋ ಪರ 983 ರನ್ ಬಾರಿಸಿದ್ದರು.ಹೀಗಾಗಿ 1000 ರನ್ ಗಡಿ ತಲುಪಲು ರಾಹುಲ್ಗೆ 17 ರನ್‌ಗಳ ಅಗತ್ಯವಿತ್ತು. ಗುಜರಾತ್ ವಿರುದ್ಧ 17ನೇ ರನ್ ಬಾರಿಸಿದ ಕೂಡಲೇ ರಾಹುಲ್ 1000 ರನ್ ಗಡಿ ದಾಟಿದರು.

ರಾಹುಲ್ ಇದುವರೆಗೆ ಲಕ್ನೋ ಸೂಪರ್ ಜೈಂಟ್ಸ್ ಪರ 28 ಪಂದ್ಯಗಳನ್ನು ಆಡಿದ್ದು, ಈ 28 ಪಂದ್ಯಗಳಲ್ಲಿ 42.33ರ ಸರಾಸರಿಯಲ್ಲಿ 1016 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 7 ಅರ್ಧಶತಕಗಳೂ ಸೇರಿವೆ.

ಏತನ್ಮಧ್ಯೆ, ಕೆಎಲ್ ರಾಹುಲ್ ಐಪಿಎಲ್ 17 ನೇ ಸೀಸನ್‌ನಲ್ಲಿ ಇದುವರೆಗೆ 31.5 ಸರಾಸರಿಯಲ್ಲಿ 126 ರನ್ ಬಾರಿಸಿದ್ದಾರೆ. ಇದರಲ್ಲಿ 1 ಅರ್ಧಶತಕವೂ ಸೇರಿದೆ.




